ಪ್ರಕೃತಿ ಬೆಳಗಾವಿ

*ಬೆಳಗಾವಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ತಾಲೂಕಿನ ತಹಶೀಲ್ದಾರ ಸಭೆ ಕರೆದು ಕ್ರಮ ಜರುಗಿಸುವಂತೆ ಮಹೇಶ್ ಶೀಗಿಹಳ್ಳಿ ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ* ವತಿಯಿಂದ ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಬೇಟಿ ಮಾಡಿ ಮನವಿ ಮಾಡಲಾಯಿತು ವಿಷಯ :- ಪರಿಶಿಷ್ಟ ಪಂಗಡ (ST )ತಳವಾರ ಎಂದು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡವರ ಹಾಗೂ ಪ್ರಮಾಣ ಪತ್ರ ನೀಡಿದ ಅಧಿಕಾರಿ / ಸಿಬ್ಬಂದಿಗಳ ವಿರುದ್ಧ ತೆಗೆದುಕೊಂಡಿರುವ ಕ್ರಮದ ಕುರಿತು ಬೇಟಿ ಮಾಡಲಾಯಿತು.

ಈ ವಿಚಾರವಾಗಿ ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆಗಳು ನಿರಂತರವಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ.

ಈ ವಿಷಯದನ್ವಯ ಉಚ್ಚ ನ್ಯಾಯಾಲಯದಲ್ಲಿ ಆದೇಶದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯವರು 11 ಭಾರಿ ನೆನಪೊಲೆಗಳನ್ನು ನೀಡಿದರು ಸಹ ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳು ಯಾವುದೆ ತಹಶೀಲ್ದಾರರು ನ್ಯಾಯ ಬದ್ಧ ಕ್ರಮಗಳನ್ನು ಜರುಗಿಸಿರುವುದಿಲ್ಲ ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ  ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ರವರ ಆದೇಶದಲ್ಲಿ ಬೇಡರ ವಾಲ್ಮೀಕಿ ನಾಯಕ ಮತ್ತು ನಾಯ್ಕಡ ಸಮುದಾಯಕ್ಕೆ ಸೇರಿದ ತಳವಾರರಿಗೆ ಹೊರತುಪಡಿಸಿ ಅನ್ಯ ಸಮಾಜದ ತಳವಾರರಿಗೆ ಕಾನೂನು ಬಾಹಿರವಾಗಿ ಪರಿಶಿಷ್ಟ ಪಂಗಡದ (ST) ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡ ವ್ಯಕ್ತಿಗಳ ವಿರುದ್ಧ ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಿದ ತಹಶೀಲ್ದಾರ ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುತ್ತಾರ.

ಹಾಗೂ karnataka schedululed castes schedule tribes and other backward classes Reservation of appointment Etc . Act 1990 ರಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ತಮಗೆ ಆದಿಕಾರವನ್ನು ಪ್ರದತ್ತ ಮಾಡಿದೆ ಎಂದು ಸ್ಪಷ್ಟ ಪಡಿಸಿರುತ್ತಾರೆ ಹಾಗೂ ಈ ಆದಿಕಾರದ ಕುರಿತಾಗಿ ಮಾನ್ಯ ಉಚ್ಚ ನ್ಯಾಯಾಲಯದ wp 13777 / 2023 ರ ( GM-CC PIL ) ರ ಪ್ರಕರಣದಲ್ಲಿ The Deputy commissioner may stay The Execution of Any such Decision or Order Pending the Exercise of the powers under sub section (1) in respect thereoff ಎಂತಲೂ ಕಾಯ್ದೆ 4F ಅಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನವಿರುತ್ತದೆ .

ಹೀಗಿರುವಾಗ ಕಾನೂನನ್ನು ಉಲ್ಲಂಘಿಸಿ ನಿಜವಾದ ಪರಿಶಿಷ್ಟ ಪಂಗಡದ ( ST) ಸಮುದಾಯಕ್ಕೆ ಸೇರದ ಅನ್ಯ ಸಮುದಾಯದವರಿಗೆ ಅಂದರೆ ಅಂಬಿಗ , ಬೆಸ್ತ , ಭೆಸ್ತ, ಸುಣಗಾರ ( ಪ್ರವರ್ಗ -1 ) ಮೊದಲಾದವರಿಗೆ ತಳವಾರ ಎಂದು ಸುಳ್ಳು , ST ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರುವ ವ್ಯಕ್ತಿಗಳ ಜಾತಿ ಪ್ರಮಾಣ ಪತ್ರಗಳನ್ನು ಕೂಡಲೆ ರದ್ದು ಪಡಿಸಬೇಕು ಹಾಗೂ ಅಂಥವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ . ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಿದೇ ಅಧಿಕಾರಿ ಸಿಬ್ಬಂದಿಗಳ ಮೇಲೆ 4F ಕಾಯ್ದೆಯಲ್ಲಿ ಈ ವರೆಗೆ ಯಾವ ಕ್ರಮವನ್ನು ಜರುಗಿಸಲಾಗಿದೆ . ಹಾಗೂ ಈ ಸುಳ್ಳು ಜಾತಿ ಪ್ರಮಾಣ ಪತ್ರ ಆಧಾರದ ಮೇಲೆ ಈವರೆಗೆ ಎಷ್ಟು ಜನರಿಗೆ ಸಿಂಧುತ್ವ ಪ್ರಮಾಣ ಪತ್ರ ವಿತರಿಸಲಾಗಿದೆ ಹಾಗೂ ಎಷ್ಟು ಜನರಿಗೆ ನೌಕರಿಯನ್ನು ನೀಡಲಾಗಿದೆ.

ಇವುಗಳನ್ನು ಸಹ ರದ್ದು ಪಡಿಸಬೇಕು ಎಂದು ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ನ್ಯಾಯ ಸಿಗದೇ ಹೋದರೆ ಸಮುದಾಯದ ವತಿಯಿಂದ ಉಗ್ರ ಹೋರಾಟ ಮಾಡುವುದರ ಜೊತೆಗೆ ಅಧಿಕಾರಿಗಳ ವಿರುದ್ಧ ನಿಂದನಾ ಪ್ರಕರಣವನ್ನು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಬೇಕಾಗುತ್ತದೆ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ಮಾಡಬೇಕಾಗುತ್ತದೆ ಎಂಬುವುದನ್ನು ತಿಳಿಸಲಾಯಿತು .
ಈ ವಿಚಾರವಾಗಿ *ಮಾನ್ಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ* ಹಾಗೂ *ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ* ರವರಿಗೂ ಮನವಿ ಸಲ್ಲಿಸಲಾಯಿತು.

ಹಾಗೂ ಸರ್ಕಾರದ ಅದಿನ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ರವರ ಹೊರಡಿಸಿದ ಆದೇಶ ಪ್ರತಿಗಳನ್ನು ಕೂಡ ಲಗ್ಗತ್ತಿಸಿ ಮನವಿ ಮಾಡಲಾಯಿತು.

ಈ ಸಂದರ್ಬದಲ್ಲಿ ಸಂಘಟನೆಯ
(ರಾಜ್ಯಾದ್ಯಕ್ಷರು ಮಹೇಶ್ ಎಸ್ ಶೀಗಿಹಳ್ಳಿ )
(ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲೇಶ್ ಮುಳಗಶಿ)
(ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ )
(ಬೆಳಗಾವಿ ನಗರ ಅಧ್ಯಕ್ಷ ಮಂಜು ತಳವಾರ )
(ಬೆಳಗಾವಿ ನಗರ ಉಪಾದ್ಯಕ್ಷ ಸಚಿನ್ ಕೆ )
ಸಂಘಟನೆಯ ಕಾರ್ಯಕರ್ತರಾದ ಶುಭಂ ತಳವಾರ ಹಾಗೂ ಆದರ್ಶ ದನದಮಣಿ ಹಾಗೂ ಇನ್ನುಳಿದ ಪದಾದಿಕಾರಿಗಳು ಉಪಸ್ಥಿತರಿದ್ದರು.******************************

Back to top button