ಪ್ರಕೃತಿ ಬೆಳಗಾವಿ

ಕೆ.ಎಲ್.ಇ ಆವರಣದ ಶಿವಾಲಯದಲ್ಲಿ ಬಿಜೆಪಿ ಮುಖಂಡರಿಂದ ವಿಶೇಷ ಪೂಜೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಕೆ.ಎಲ್.ಇ ಆವರಣದ ಶಿವಾಲಯದಲ್ಲಿ ಬಿಜಿಪಿ ಮುಖಂಡರು, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಹಾಗೂ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರ ನೇತ್ರತ್ವದಲ್ಲಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ಶೀವಾಲಯದಲ್ಲಿ ವಿಷೇಶ ಪೂಜೆಯನ್ನು ಸಲ್ಲಿಸಿದ ಬಳಿಕ ಮಾತನಾಡಿದ ಮಾಹಾಂತೇಶ ಕವಟಗಿಮಠ, ಮಹಮದ್ ಘಜನಿ ಗುಜರಾತಿನ ಸೋಮನಾಥ ಮಂದಿರದ ಮೇಲೆ ದಾಳಿ ನಡೆಸಿ 1,000 ವರ್ಷ ಜನವರಿ 2026ಕ್ಕೆ ಪುರ್ಣಗೊಂಡಿದೆ.

1026 ಜನವರಿಯಲ್ಲಿ ಮಹಮದ್ ಘಜನಿ ದಾಳಿ ಮಾಡಿದ್ದ, ಇದೀಗ 1000 ವರ್ಚಗಳು ಪೂರ್ಣಗೊಳ್ಳುತ್ತಿದೆ. ಹಿಂದೂಗಳಿಗೆ ಇದೊಂದು ಕರಾಳ ದಿನವಾಗಿದೆ. ಸೋಮನಾಥ್ ದೇವಸ್ಥಾನ ಬಗ್ಗೆ ಜನತೆಯ ಸಹನಶೀಲತೆ, ನಿರಂತರತೆ, ಪುನರುತ್ಥಾನದ ಯಶೋಗಾಥೆಯನ್ನು ನೆನಪಿಸಿಕೊಳ್ಳಲು ಈ ವರ್ಷ ‘ಸೋಮನಾಥ ಪರ್ವ’ ವನ್ನು ಆಯೋಜಿಸಲು ನಿಶ್ಚಯಿಸಲಾಗಿದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ 2026ಕ್ಕೆ ಮಂದಿರ ಮರುನಿರ್ಮಾಣವಾಗಿ 75 ವರ್ಷ ಪೂರ್ಣಗೊಳ್ಳಲಿದೆ. 1, ಮೇ 1951ರಂದು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಮಂದಿರವನ್ನು ಭಕ್ತರಿಗೆ ಮತ್ತೆ ತೆರೆಯಲಾಯಿತು.

1026ರ ಈ ಹೃದಯವಿದ್ರಾವಕ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮತ್ತು ಸೋಮನಾಥದ ಅಖಂಡತೆಗೆ ನಮಿಸುತ್ತಾ, ಎಲ್ಲ ಶಿವಾಲಯಗಳಲ್ಲಿ ಓಂಕಾರ ಮಂತ್ರ ಜಪಿಸಲು ನಿರ್ಧರಿಸಲಾಗಿದೆ. ಎಲ್ಲಾ ದೇಶವಾಸಿಗಳು ಈ ಜನ-ಅಭಿಯಾನದಲ್ಲಿ ಪಾಲ್ಗೊಂಡು, ತಮ್ಮ ಹತ್ತಿರದ ಶಿವಾಲಯಗಳಲ್ಲಿ ಮಂತ್ರ ಪಠಣದಲ್ಲಿ ಭಾಗವಹಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಸಂತೋಷ ದೇಶನೂರ,ಸುಭಾಷ ಸಣ್ಣವೀರಪ್ಪನವರ್ ಪ್ರವೀಣ ಮಾಳೆದವರ ಮಂಜುನಾಥ ಅಷ್ಟಗಿ ಸೇರಿದಂತೆ ಬಿಜಿಪಿ ಪ್ರಮುಖರು, ಕಾರ್ಯಕರ್ತರು ಇದ್ದರು.************************************

Back to top button