ಬ್ಯಾಂಕುಗಳ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ನಡೆಸಿದ ಸಂಸದ ಜಗದೀಶ ಶೆಟ್ಟರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ್ ಇವರು ಇಂದು ಬ್ಯಾಂಕಿನ ಬೆಳಗಾವಿ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯ ಸಭೆಯನ್ನು ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆಸಿದರು.
1) ನೂತನ ಬ್ಯಾಂಕ್ ಶಾಖೆಗಳನ್ನು ಜಿಲ್ಲೆಯಲ್ಲಿ ತೆರೆಯುವ ಬಗ್ಗೆ ಸಭೆಯಲ್ಲಿ ಸಂಸದರು ವಿಚಾರಿಸಲಾಗಿ, ಸಾರ್ವಜನಿಕರ ಅನೇಕ ದಿನಗಳ ಬೇಡಿಕೆಯಂತೆ, ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನೂತನ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಶಾಖೆಯನ್ನು ತೆರೆಯುವ ಬಗ್ಗೆ ಅನುಮೋದನೆ ದೊರೆತಿರುವ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ತಿಳಿಸಿದರು. ಸಾರ್ವಜನಿಕರ ಬೇಡಿಕೆಯಂತೆ, ಹುಣಶ್ಯಾಳ ಪಿ ವಾಯ್. ಹುದಲಿ, ಧಾಮನೆ, ಮತ್ತು ಕಲ್ಲೋಳ್ಳಿ ಗ್ರಾಮದಲ್ಲಿಯೂ ಸಹ ಶಾಖೆಗಳನ್ನು ತೆರೆಯುವ ಬಗ್ಗೆ ಅಧಿಕಾರಿಗಳು ಶೀಘ್ರ ಕ್ರಮವನ್ನು ಜರುಗಿಸಲು ಸಂಸದರು ಶ್ರೀ ಜಗದೀಶ್ ಶೆಟ್ಟರು ಇವರು ಸೂಚಿಸಿದರು.
2) ಇನ್ನು ಸಹಕಾರಿ ಸಂಘಗಳ ಸೌಹಾರ್ದ ಬ್ಯಾಂಕಗಳಲ್ಲಿ ಅನೇಕ ಗ್ರಾಹಕರು ಕಷ್ಟಪಟ್ಟು ಗಳಿಸಿದ ಹಣವನ್ನು ಠೇವಣಿ ಇಡುತ್ತಾರೆ. ಆದರೆ ಕೆಲವು ದಿನಗಳ ನಂತರ ಇದನ್ನು ಮರಳಿ ಪಡೆಯಲು ಹೋದಾಗ ಅವರಿಗೆ ಠೇವಣಿ ಹಣ ನೀಡದೆ ಸೌಹಾರ್ದ ಬ್ಯಾಂಕುಗಳ ಅಧಿಕಾರಿಗಳು ವಾಪಸ ಕಳುಹಿಸಿ ಮೋಸ ಮಾಡುತ್ತಾರೆ. ಈ ವಿಷಯವಾಗಿ ಗ್ರಾಹಕರನ್ನು ರಕ್ಷಿಸಲು ಆರ್.ಬಿ.ಐ ಏನಾದರೂ ಮಾರ್ಗಸೂಚಿ ಇದ್ದಲ್ಲಿ ಅದನ್ನು ಪ್ರಯೋಗಿಸುವಂತೆ ಹಾಜರಿದ್ದ ಆರ್.ಬಿ.ಐ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
3) ಇನ್ನು ಬ್ಯಾಂಕಿನ ಗ್ರಾಹಕರ ಖಾತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಕ್ಕು ಪಡೆಯುವ ಮೊತ್ತ (Unclaimed Deposit Amount) ವಿದ್ದು, ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಭಾಷಣದಲ್ಲಿ ಪ್ರಸ್ತಾಪಿಸಿದಂತೆ ದೇಶದಲ್ಲಿ ಸುಮಾರು ರೂ: 75 ಸಾವಿರ ಕೋಟಿ ಹಣ ಹಕ್ಕು ಪಡೆಯದ ಮೊತ್ತದಲ್ಲಿ ಸೇರಿದ್ದಾಗಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿಯೂ ಸಹ ಸುಮಾರು ರೂ: 175 ಕೋಟಿ ಹಣ ಇದ್ದು, ಅದನ್ನು ಆದಷ್ಟು ಬೇಗನೆ ಗ್ರಾಹಕರ ವಾರಸುದಾರರಿಗೆ ಹಿಂದಿರುಗಿಸುವಂತೆ ಶೀಘ್ರ ಕ್ರಮವನ್ನು ಕೈಕೊಳ್ಳಲು ಸಂಸದರು ಸೂಚಿಸಿದರು.
4) ನಾರ್ಬಾಡ್ ಯೋಜನೆಯಡಿ ಅನುಮೊದನೆಗೊಂಡ ರೂ: 9 ಕೋಟಿ ವೆಚ್ಚದ “ಕೋಲ್ಡ್ ಸ್ಟೋರೇಜ್ ಪ್ಲಾಂಟ್ ನಿರ್ಮಾಣ ಕಾಮಗಾರಿಯು ಎ.ಪಿ.ಎಮ್.ಸಿ ಬೆಳಗಾವಿ ಹತ್ತಿರ ಚಾಲ್ತಿಯಲ್ಲಿದ್ದು, ಈ ಕಾಮಗಾರಿಯ ಪ್ರಗತಿಯ ಬಗ್ಗೆ ವಿವರ ಪಡೆಯುತ್ತಾ ನಾಬಾರ್ಡ್ ಯೋಜನೆಯಡಿ ಜಿಲ್ಲೆಯಲ್ಲಿರುವ ಕೆಲವು ಶಾಲೆಗಳ ದುರಸ್ತಿಯ ಅಥವಾ ನೂತನ ಕೊಠಡಿಗಳ ನಿರ್ಮಾಣದ ಬಗ್ಗೆಯೂ ಸಹ RIDF ದಡಿ ಅನುದಾನ ಒದಗಿಸುವ ಬಗ್ಗೆ ನಾಬಾರ್ಡ್ ವ್ಯವಸ್ಥಾಪಕರಿಗೆ ಸಂಸದರು ಸೂಚಿಸದರು.
ಕೇಂದ್ರ ಸರಕಾರದ ಯಾವುದೇ ಯೋಜನೆಯ ಸಮರ್ಪಕ ಅನುಷ್ಠಾನ ಬ್ಯಾಂಕ ಅಧಿಕಾರಿಗಳ ಸಹಕಾರದಿಂದ ಮಾತ್ರ ಸಾಧ್ಯ. ಈ ಹಿನ್ನಲೆಯಲ್ಲಿ ಪ್ರಸ್ತಾಪಿತ ಯೋಜನೆಯ ಅನುಷ್ಠಾಣಕ್ಕೆ ಬ್ಯಾಂಕಿಗೆ ಭೇಟಿ ನೀಡುವ ಫಲಾನುಭವಿಗೆ ಸಾಲ ಸೌಲಭ್ಯವನ್ನು ನೀಡಿ, ಸಹಕರಿಸಲು ಬ್ಯಾಂಕಿನ ಅಧಿಕಾರಿಗಳಲ್ಲಿ ಬೆಳಗಾವಿ ಲೋಕಸಭಾ ಸದಸ್ಯರು ಸೂಚಿಸಿದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ ಶಿಂಧೆ, ಎಲ್.ಡಿ.ಎಮ್ ಶ್ರೀ ಪ್ರಶಾಂತ, ನಾಬಾರ್ಡ್ ವ್ಯವಸ್ಥಾಪಕರಾದ ಶ್ರೀ ಅಭಿನವ, ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜಿದ್ದರು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.**********************************






