ಪ್ರಕೃತಿ ಬೆಳಗಾವಿ
ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಮಹೇಶ್ ಶೀಗಿಹಳ್ಳಿ ಆಯ್ಕೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಶ್ರೀ ಮಹೇಶ್ ಎಸ್ ಶೀಗಿಹಳ್ಳಿ ರವರನ್ನು ಕಿತ್ತೂರು ಕರ್ನಾಟಕ ಸೇನೆಯ ಯುವ ಘಟಕದ ರಾಜ್ಯಾಧ್ಯಕ್ಷ ರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಮಹೇಶ್ ಶೀಗಿಹಳ್ಳಿ ರವರ ನಿರಂತರ ಹೋರಾಟ ಸಾಮಾಜಿಕ ರೈತ ಪರ ಹಾಗೂ ಸಮಾಜ ಸೇವೆ ಮತ್ತು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಇಚ್ಛಾಶಕ್ತಿ ಹಾಗೂ ಹೋರಾಟದ ಕಿಚ್ಚು ಮತ್ತು ಸಂಘಟನೆಯ ತಾಂತ್ರಿಕತೆ ಶೃಷ್ಟಿಸುವುದು ಮತ್ತು ಯುವಕರಲ್ಲಿ ಮನೆ ಮಾತಾಗಿರುವ ಯುವಕರಿಗೆ ಜಾಗೃತಿ ಮೂಡಿಸುವ ಈ ಎಲ್ಲಾ ಸಂಘಟನಾ ಕಾರ್ಯಗಳನ್ನು ಗುರುತಿಸಿ ನೈಜವಾದ ಹೋರಾಟಗಾರರನ್ನು ಗುರುತಿಸಿ.
ಕಿತ್ತೂರು ಕರ್ನಾಟಕ ಸೇನೆ ಕನ್ನಡ ಸಂಘಟನೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಮಹಾದೇವ ತಳವಾರ ರವರು ಬೈಲಹೊಂಗಲ ಕನ್ನಡಿಗರ ಉತ್ಸವ ಕಾರ್ಯಕ್ರಮದಲ್ಲಿ ಆದೇಶ ಹೊರಡಿಸಿದ್ದಾರೆ.******************************






