8 ದಿನದಲ್ಲಿ ರಸ್ತೆ ರಿಪೇರಿ ಮಾಡದಿದ್ದರೆ ಪಂಚಾಯತಿಗೆ ಮುತ್ತಿಗೆ ಹಾಕಿ ಬೇಗ ಜಡಿದು ಪ್ರತಿಭಟಿಸಲಾಗುವುದು: ಮಹಾದೇವ ಘಾಟ್ಯಾಗೋಳ…
ಪ್ರಕೃತಿ ಬೆಳಗಾವಿ ಸುದ್ದಿ : ಪಾಲಬಾವಿ : ದಿನವಿಡೀ ಸುರಿಪುರ ಮಳೆಯಿಂದ ಗ್ರಾಮದ ತೋಟದ ರಸ್ತೆಗಳು ಹದಗೆಟ್ಟು ಹೋಗಿದ್ದು ಪ್ರತಿದಿನ ಶಾಲಾ ಮಕ್ಕಳು ಊರು ಒಳಗೆ ಬರಬೇಕು, ರೈತರು ಹಾಲು ಡೇರಿಗಳಿಗೆ ಹಾಕುವುದು, ಅಂಗಡಿಗೆ ದಿನಸಿ ಸಾಮಾನು ತರುವುದು, ಬ್ಯಾಂಕ್ ಹೀಗೆ ಅನೇಕ ವ್ಯವಹಾರಕ್ಕಾಗಿ ಗ್ರಾಮಕ್ಕೆ ಬರಬೇಕಾದರೆ ಕೆಸರಿನ ಗದ್ದೆಯಾದ ರಸ್ತೆಯಲ್ಲಿ ನಡೆಯುತ್ತಾ ಬರುವುದು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ತೋಟದ ನಿವಾಸಿ ಬಸವರಾಜ ಪಡಿ ಹಾಗೂ ಮಹಾದೇವ ಘಾಟ್ಯಾಗೋಳ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಬಾಗ ತಾಲೂಕು ಹಂದಿಗುಂದ ಗ್ರಾಮದಲ್ಲಿ ಮಂಗಳವಾರ ಮುಂಜಾನೆ 11 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಹಂದಿಗುಂದ ಗ್ರಾಮದ ವಾರ್ಡ್ ನಂಬರ್ 4ರಲ್ಲಿ ಹಂದಿಗುಂದ -ಕಾಲತಿಪ್ಪಿ ಅರಗಾಡ ಶ್ರೀ ಲಕ್ಷ್ಮಿದೇವಿ ದೇವಸ್ಥಾನ ಕುಡುವ ತೋಟದ ಮುಖ್ಯ ರಸ್ತೆಗೆ ಗರಸು(ಮುರಮ) ಹಾಕಿ ರಸ್ತೆಯನ್ನು ರಿಪೇರಿ ದೇವಸ್ಥಾನಕ್ಕೆ ಹೋಗಲು ರೈತ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಗ್ರಾಮ ಪಂಚಾಯತ್ ಸದಸ್ಯರಿಗೆ ಹಲವಾರು ಬಾರಿ ಹೇಳಿದ್ದೇವೆ. ಆದರೇ ಇದರ ಬಗ್ಗೆ ಸದಸ್ಯರು ಕಾಳಜಿ ವಹಿಸಲ್ಲವೆಂದು ಆರೋಪಿಸಿದರು.
ಹಂದಿಗುಂದ- ಕಾಲತಿಪ್ಪಿ ಸಂಪರ್ಕಿಸುವ ಈ ತೋಟದ ರಸ್ತೆಯು 3 ಕಿಲೋ ಮೀಟರ್ ಅಂತರವಿದ್ದು ತೋಟದ ನಿವಾಸಿಗಳು ಗ್ರಾಮದೊಳಗೆ ವ್ಯಪಾರ ವಹಿವಾಟು ಮಾಡುವುದಕ್ಕೆ, ಶಾಲಾ ಮಕ್ಕಳು ಬರಬೇಕಾದರೆ, ರೈತರು ಹಾಲು, ಅಂಗಡಿ ದಿನಸಿ ಸಾಮಾನು, ವ್ಯಾಪಾರಕ್ಕೆ ಬರಬೇಕು, ಬ್ಯಾಂಕ್, ಪರಸ್ಥಳಕ್ಕೆ ಹೋಗಬೇಕಾದರೆ ರಸ್ತೆಯು ಕೆಸರಮಯವಾಗಿದ್ದು, ಗ್ರಾಮ ಪಂಚಾಯತಿಯವರು ಕಾಜಿವಹಿಸಿ ರಸ್ತೆಗೆ ಗರಸುವ ಕಡೆಸಬೇಕು. ಬರಿ ಹಾರಕಿ ಉತ್ತರ ಕೊಡುವುದಾದರೆ, ತೋಟದ ನಿವಾಸಿಗಳು, ನೂರಾರು ರೈತರು ಮಹಿಳೆಯರೊಂದಿಗೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಬೇಗ ಜಡೆದು ಪ್ರತಿಭಟಿಸಲಾಗುವುದೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಪಡಿ, ಮಹಾದೇವ ಘಾಟ್ಯಾಗೋಳ, ಪ್ರಕಾಶ ಗೋಕಾಕ, ಶಿವಮಲ್ಲ ಗೋಕಾಕ, ಮಹಾಲಿಂಗ ಗೋಕಾಕ, ಯೋಗೇಶ ಸಾತಪ್ಪಗೋಳ, ಚಿದಾನಂದ ಮಾನೋಜಿ, ಸಂಗಪ್ಪ ಪೂಜಾರಿ, ಶಿವಾನಂದ ಸಾತ್ತಪ್ಪಗೋಳ, ಲಕ್ಕಪ್ಪ ಗೋಕಾಕ, ಮಲ್ಲಿಕಾರ್ಜುನ ಗೋಕಾಕ, ಕೆಂಪಣ್ಣ ಗೋಕಾಕ, ಶಿವಪುತ್ರ ಗೋಕಾಕ, ಪ್ರಕಾಶ ಘಾಟ್ಯಾಗೋಳ ಇತರರು ಇದ್ದರು.
ಬಾಕ್ಸ್ ಲೈನ್ ==
“ಹಂದಿಗುಂದ ಗ್ರಾಮದಲ್ಲಿ ವಾರ್ಡ್ ನಂಬರ್ 4ರಲ್ಲಿರುವ ಹಂದಿಗುಂದ -ಕಾಲತಿಪ್ಪಿ ಕೊಡುವ ರಸ್ತೆಯನ್ನು ಸ್ಥಳ ಪರಿಶೀಲನೆ ಮಾಡಿ ರೈತರೊಂದಿಗೆ ಚುನಾಯಿತ ಸದಸ್ಯರೊಂದಿಗೆ ಚರ್ಚಿಸಿ ರಸ್ತೆಗೆ ಕಲಿಸುವುದು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವ ವ್ಯವಸ್ಥೆಯನ್ನು ಮಾಡಿಸುತ್ತೇವೆ.**************************






