ಪಾಲಬಾವಿ ಬಾರ್ ಆಂಡ್ ರೆಸ್ಟೋರೆಂಟ್ ರದ್ದುಪಡಿಸಲು ಎರಡನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ…!!
ಗ್ರಾಮದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ನೀಡಿರುವ ಪರವಾನಿಗೆ ರದ್ದು ಪಡಿಸದಿದ್ದರೆ 12ರಿಂದ ಉಪವಾಸ ಸತ್ಯಾಗ್ರಹ: ಬರಮಪ್ಪ ನಿಂಗನೂರ…
ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬರುವ ಅಗಸ್ಟ್ 12 ಹಾಗೂ 13 ರಂದು ವಿಶೇಷ ಸಾಮಾನ್ಯ ಸಭೆಯನ್ನು ಕರೆಯುತ್ತಾರೆ. ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ಗೆ ಅನುಮತಿ (ಲೈಯಿಸನ್ಸ್) ನೀಡಿರುವ ಬಗ್ಗೆ ಸಭೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ, ಗ್ರಾಮಸ್ಥರು ಧರಣಿಯನ್ನು ಕೈಬಿಡಬೇಕೆಂದು ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು.
ಅವರು ರಾಯಬಾಗ ತಾಲೂಕು ಪಾಲಬಾವಿ ಗ್ರಾಮಕ್ಕೆ ಆಗಸ್ಟ್ 8ರಂದು ಗುರುವಾರ ಮುಂಜಾನೆ 11ಗಂಟೆಗೆ ಭೇಟಿ ನೀಡಿ ಪಾಲಬಾವಿ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂಭಾಗದಲ್ಲಿ ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಪರವಾನಿಗೆ ರದ್ದು ಪಡಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಎರಡನೇ ದಿನದ ಧರಣಿನಿರತ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.
ತಹಶೀಲ್ದಾರ್ ಸುರೇಶ ಮುಂಜೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಹುಲೆಪ್ಪ ತೇಗೂರ ಹಾಗೂ ಬರಮಪ್ಪ ನಿಂಗನೂರ ಅವರು ಪಾಲಬಾವಿ ಗ್ರಾಮದಲ್ಲಿ ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಗ್ರಾಮ ಪಂಚಾಯತ್ ಅವರು ಈ ಹಿಂದೆ ಜೂನ್ 20ರಂದು ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯಸಭೆ ಕರೆದು ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಪರವಾನಿಗೆ (ಲೈಸೆನ್ಸ್ ) ನೀಡಿರುವುದು ಖಂಡನೀಯ, ಪರವಾನಿಗೆ ರದ್ದು ಪಡಿಸದಿದ್ದರೆ, ಆಗಸ್ಟ್ 12ರಿಂದ ಉಪವಾಸ ಸತ್ಯಾಗ್ರಹ ಮಾಡಲಾಗುವುದೆಂದು ತಿಳಿಸಿ ಮಾನ್ಯ ತಹಸೀಲ್ದಾರ್ ಸುರೇಶ ಮುಂಜೆ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯತ್ ಕಾರ್ಯಾಲಯದ ಸಭಾಭವನ ಮುಂದೆ ಮಹಾತ್ಮ ಗಾಂಧೀಜಿ ಹಾಗೂ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಎರಡನೇ ದಿನದ ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಮಾತನಾಡಿದ ಬರಮಪ್ಪ ಜೋಗಿಯವರು ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು ಗ್ರಾಮದ ಮತದಾರರಿಂದ ವೋಟು ಪಡೆದು ಜನಸೇವೆ ಮಾಡಲು ಬಂದು ಗ್ರಾಮಕ್ಕೆ ಒಳ್ಳೆಯದನ್ನು ಬಯಸಬೇಕು, ಗ್ರಾಮದಲ್ಲಿ ಅಶಾಂತಿಗೆ ಒಳಪಡುವಂತ ಕೆಲಸಕ್ಕೆ ಯಾರೂ ಕೈ ಹಾಕಬಾರದು ಎಂದರು.
ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ನಡೆದ ಸ್ಥಳದಲ್ಲಿ ಪಿಡಿಒ ಶ್ರೀಕಾಂತ ಪಾಟೀಲ, ಗ್ರಾಮ ಆಡಳಿತ ಅಧಿಕಾರಿ ಎಸ್.ಎಸ್.ಹತ್ತರಕಿ, ಕಾರ್ಯದರ್ಶಿ ರಮೇಶ ಪಾಟೀಲ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ಸಂಚಾಲಕ ರಾಘವೇಂದ್ರ ಶಿಂಪಿ, ಪರಪ್ಪ ಮರಡಿ, ಹೋರಾಟಗಾರ ವಿನಯ ಬಿದರಮಳ್ಳಿ, ಗ್ರಾಪಂ ಸದಸ್ಯ ಸಿರಿಯಾಳ ಮಾದರ, ಬರಮಪ್ಪ ಮಾನಶೆಟ್ಟಿ, ಚನ್ನಪ್ಪ ಬಳಿಗಾರ, ಬರಮಪ್ಪ ಜೋಗಿ, ಶ್ರೀಶೈಲ ಗೋಡಿ, ಪಿಕೆಪಿಸ್ ಸಂಘದ ನಿರ್ದೇಶಕ ಷಣ್ಮುಖ ಕಾಡಶೆಟ್ಟಿ, ಪರಪ್ಪ ನಿಂಗನೂರ, ಅಸ್ಲಂ ಬಿರಾದಾರ, ಶ್ರೀಶೈಲ ನಿಂಗನೂರ, ದುಂಡಪ್ಪ ತೇಗೂರ, ಅಲ್ಲಪ್ಪ ನಿಂಗನೂರ, ಬಸವರಾಜ ತೇಗೂರ, ಶ್ರೀಶೈಲ ಕೆಸರಗೋಪ್ಪ, ಸಂಗಮೇಶ ನಿಂಗನೂರ, ಮಹಾದೇವ ಗೋಲಬಾವಿ, ಸಚಿನ ಮರಡಿ, ಸಂಗಪ್ಪ ಕುದರಿ ಗ್ರಾಮಸ್ಥರು ಇದ್ದರು.*************************
ಬಾಕ್ಸ್ ಲೈನ್ ==
“ಪಾಲಬಾವಿ ಗ್ರಾಮದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಪರವಾನಿಗೆ ನೀಡಿದ ಗ್ರಾಮ ಪಂಚಾಯಿತ್ ಸದಸ್ಯರ ತೀರ್ಮಾನವು ಖಂಡನೀಯವಾದದ್ದು, ಪರವಾನಿಗೆ ನೀಡಿರುವುದನ್ನು ರದ್ದು ಪಡಿಸದಿದ್ದರೆ ಆಗಸ್ಟ್ 12ರಿಂದ ಕೆಲವು ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಮಾಡುತ್ತೇವೆ”
===} ಭರಮಪ್ಪ ನಿಂಗನೂರ,
(ಗ್ರಾಪಂ ಮಾಜಿ ಅಧ್ಯಕ್ಷ ಪಾಲಬಾವಿ)






