ಪ್ರಕೃತಿ ಬೆಳಗಾವಿ

ಪಾಲಬಾವಿ: ಬಾರ್ ಅಂಡ್ ರೆಸ್ಟೋರೆಂಟ್ ರದ್ದುಪಡಿಸಲು ಧರಣಿ ಸತ್ಯಾಗ್ರಹ ಆರಂಭ…!!

ಗ್ರಾಮದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ನೀಡಿರುವ ಪರವಾನಿಗೆ ರದ್ದು ಪಡಿಸುವ ವರೆಗೆ ಧರಣಿ ಸತ್ಯಾಗ್ರಹ: ಬರಮಪ್ಪ ನಿಂಗನೂರ…

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ತಾಲೂಕು ಪಾಲಬಾವಿ ಗ್ರಾಮದಲ್ಲಿ ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಗ್ರಾಮ ಪಂಚಾಯತ್ ಅವರು ಈ ಹಿಂದೆ ಜೂನ್ 20ರಂದು ಗ್ರಾಮ ಪಂಚಾಯಿತಿಯಲ್ಲಿ ಸಭೆ ಕರೆದು ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಪರವಾನಿಗೆ (ಲೈಸೆನ್ಸ್ ) ನೀಡಿರುವರಿಂದ ಗ್ರಾಮಸ್ಥರು ರೊಚ್ಚಿಗೆದ್ದು ಹುಲೆಪ್ಪ ತೇಗೂರ ಹಾಗೂ ಮಾಜಿ ಗ್ರಾಪಂ ಅಧ್ಯಕ್ಷ ಭರಮಪ್ಪ ನಿಂಗನೂರ ನೇತೃತ್ವದಲ್ಲಿ ಆಗಸ್ಟ್ 07ರಂದು ಮುಂಜಾನೆ 10ಗಂಟೆಗೆ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮಸ್ಥರು, ಮಹಿಳೆಯರು, ವಿವಿಧ ದಲಿತ ಪರ ಸಂಘಟಕರೊಂದಿಗೆ ಧರಣಿ ಸತ್ಯಾಗ್ರಹ ನಡೆಸಿದರು.

ಕಳೆದ ಜೂನ್ 25ರಂದು ತಾಲೂಕು ಪಂಚಾಯಿತ ರಾಯಬಾಗ, ಗ್ರಾಮ ಪಂಚಾಯತ್ ಪಾಲಬಾವಿ ಕಚೇರಿಗೆ ತೆರಳಿ ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಪರವಾನಿಗೆ ನೀಡಿರುವುದನ್ನು ರದ್ದು ಪಡಿಸಬೇಕೆಂದು 50ಕ್ಕೂ ಹೆಚ್ಚು ಗ್ರಾಮಸ್ಥರು ಸಹಿ ಮಾಡಿದ ಅರ್ಜಿಯೊಂದಿಗೆ ದೂರ ಸಲ್ಲಿಸಿದ್ದರು.

ರಾಯಬಾಗ ತಾಲೂಕು ಪಂಚಾಯಿತಿಗೆ ಹಾಗೂ ಪಾಲಬಾವಿ ಗ್ರಾಮ ಪಂಚಾಯಿತಿಗೆ ದೂರು ಕೊಟ್ಟು 40ದಿನಗಳು ಕಳೆದರೂ ಗ್ರಾಮಸ್ಥರ ಅರ್ಜಿಗೆ ಸೊಪ್ಪು ಹಾಕದ ಅಧಿಕಾರಿಗಳ ನಡೆಯನ್ನು ಖಂಡಿಸಿ ಸಾಯಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ಪಂಚಾಯತಿಯವರು ನೀಡಿದ ಉದ್ಯೋಗ ಪರವಾನಿಗೆ (ಲೈಸೆನ್ಸ್) ರದ್ದು ಪಡಿಸಬೇಕೆಂದು ಬುಧವಾರ ಜುಲೈ 7ರಂದು ಮುಂಜಾನೆ 10 ಗ್ರಾಮ ಪಂಚಾಯಿತ್ ಕಾರ್ಯಾಲಯಕ್ಕೆ ನೂರಾರು ಗ್ರಾಮಸ್ಥರು, ಮಹಿಳೆಯರು ಮುತ್ತಿಗೆ ಹಾಕಿ, ಧರಣಿ ಸತ್ಯಾಗ್ರಹ ನಡೆಸಲು ಆರಂಭಿಸಿದರು.

ಪಾಲಬಾವಿ ಗ್ರಾಮದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಪರವಾನಿಗೆ ನೀಡಿರುವುದನ್ನು ಖಂಡಿಸಿ ಪಾಲಬಾವಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಧರಣಿಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ, ಪಿಎಸ್ಐ ಮಾಳಪ್ಪ ಪೂಜೇರಿ, ಪಿಡಿಒ ಶ್ರೀಕಾಂತ ಪಾಟೀಲ, ಎಎಸ್ಐ ಸೂರ್ಯಕಾಂತ ಶಿಂಗೆ, ಕಾರ್ಯದರ್ಶಿ ರಮೇಶ ಪಾಟೀಲ ಪ್ರತಿಭಟನಾಕಾರರಿಗೆ ಧರಣಿ ಸತ್ಯಾಗ್ರಹ ಕೈಬಿಡುವಂತೆ ಸೂಚಿಸಿದರು.

ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಗ್ರಾಮಸ್ಥರು ಮಾಜಿ ಗ್ರಾಪಂ ಅಧ್ಯಕ್ಷ ಬರಮಪ್ಪ ನಿಂಗನೂರ, ಹುಲೆಪ್ಪ ತೇಗೂರು, ಪ್ರಭಾಕರ ಕುರಬೆಟ್ಟಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ರಾಘವೇಂದ್ರ ಶಿಂಪಿ, ಗ್ರಾಪಂ ಸದಸ್ಯ ಸಿರಿಯಾಳ ಮಾದರ, ಬರಮಪ್ಪ ಮಾನಶೆಟ್ಟಿ, ರೈತ ಸಂಘ ಮುಖಂಡ ಬರಮಪ್ಪ ಜೋಗಿ, ಪ್ರಕಾಶ ಪಾಟೀಲ, ಅಸ್ಲಾಂ ಬಿರಾದಾರ, ವಕೀಲ ಅಲ್ಲಮಪ್ರಭು ತೇಗೂರ, ಶ್ರೀಶೈಲ ನಿಂಗನೂರ, ಅಲ್ಲಪ್ಪ ನಿಂಗನವರ ಯುವಧುರೀಣ ಸಂಗಮೇಶ ನಿಂಗನೂರ, ಗುರು ಮಾದರ, ಗಿರೆಪ್ಪ ಬಳಿಗಾರ, ಸಾಗರ ಕುರಬೆಟ್ಟಿ, ಭೀಮಪ್ಪ ಸಂಗಳಿ, ಬಾವುರಾಜ ತೇಗೂರ, ಸಚಿನ್ ಮರಡಿ, ಮುತ್ತಪ್ಪ ಮಾದರ, ಸಂಗಪ್ಪ ಮಾನಶೆಟ್ಟಿ, ರಮೇಶ ಮಾದರ, ರೆಹಮಾನ್ ಮಿರ್ಜಿ, ವಿವೇಕಾನಂದ ಮರಡಿ, ಶ್ರೀಶೈಲ ಮಲ್ಲನವರ, ರಾಮಪ್ಪ ಗೋಡಿ, ಗಂಗವ್ವ ಪಾಟೀಲ, ಚಂದ್ರವ್ವ ಉದಗಟ್ಟಿ, ಯಮನವ್ವ ಮಾದರ, ಕೃಷ್ಣಬಾಯಿ ಮಾದರ, ಮಲ್ಲವ್ವ ಮಾದರ, ಯಲ್ಲವ್ವ ಮಾದರ, ತಂಗ್ಯವ್ವ ಪಡಸಲಗಿ, ಕಾಶವ್ವ ಮಾದರ, ರೇಣುಕಾ ಮಾದರ ಇತರರು ಇದ್ದರು.

ಬಾಕ್ಸ್ ಲೈನ್ ===
“ಪಾಲಬಾವಿ ಗ್ರಾಮದಲ್ಲಿ ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಈ ಹಿಂದೆ ಜೂನ್ 20ರಂದು ಸಾಮಾನ್ಯ ಸಭೆಯಲ್ಲಿ ರವಿ ಠಕ್ಕಣ್ಣವರ ಅವರಿಗೆ ಉದ್ಯೋಗ ಪರವಾನಿಗೆ (ಲೈಸೆನ್ಸ್) ಕೊಟ್ಟಿರುತ್ತಾರೆ. ಗ್ರಾಮದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭವಾದರೆ ಗ್ರಾಮದಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಶಾಂತಿ ಉಂಟಾಗಿ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಲೈಸೆನ್ಸ್ ರದ್ದು ಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಧರಣಿ ಸತ್ಯಾಗ್ರಹವನ್ನು ನಡೆಸಿದ್ದಾರೆ. ಜೂನ್ 20ರಂದು ಕರೆದ ಸಾಮಾನ್ಯ ಸಭೆಯಲ್ಲಿ ಮಾಡಿದ ಠರಾವು ಅಂತಿಮವಲ್ಲ. ಇನ್ನೊಂದು ಸಾಮಾನ್ಯ ಸಭೆ ಕರೆದು ಠರಾವು ರದ್ದು ಪಡಿಸಲು ಅವಕಾಶವಿದೆ. ಇದೇ ಆಗಸ್ಟ್ 12 ಅಥವಾ 13 ರಂದು ಮತ್ತೊಂದು ಸಾಮಾನ್ಯ ಸಭೆ ಕರೆದು ಪರವಾನಿಗೆ (ಲೈಸೆನ್ಸ್) ನೀಡಿದ ವಿಷಯವಾಗಿ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಧರಣಿ ಸತ್ಯಾಗ್ರಹದಲ್ಲಿ ಮಹಿಳೆಯರು, ಮಕ್ಕಳು, ವಯಸ್ಸಾದ ಹಿರಿಯರು ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು. ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಧರಣಿ ಸತ್ಯಾಗ್ರಹವನ್ನು ಕೈಬಿಡಬೇಕು.
===} ಅರುಣ ಮಾಚಕನೂರ
(ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಯಬಾಗ)

ಬಾಕ್ಸ್ ಲೈನ್ ==
“ಪಾಲಬಾವಿ ಗ್ರಾಮದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಪರವಾನಿಗೆ ನೀಡಿದ ಗ್ರಾಮ ಪಂಚಾಯಿತ್ ಸದಸ್ಯರ ತೀರ್ಮಾನವು ಖಂಡನೀಯವಾದದ್ದು, ಪರವಾನಿಗೆ ನೀಡಿದ್ದನ್ನು ರದ್ದು ಪಡಿಸುವವರೆಗೆ ಗ್ರಾಮಸ್ಥರು ನಾವು ಧರಣಿ ಸತ್ಯಾಗ್ರಹವನ್ನು ಮುಂದುವರಿಸುತ್ತೇವೆ”
===} ಭರಮಪ್ಪ ನಿಂಗನೂರ,
(ಗ್ರಾಪಂ ಮಾಜಿ ಅಧ್ಯಕ್ಷ ಪಾಲಬಾವಿ)

ಬಾಕ್ಸ್ ಲೈನ್ ===
“ಕಳೆದ ಹಲವು ವರ್ಷಗಳಿಂದ ಪಾಲಬಾವಿ ಗ್ರಾಮದಲ್ಲಿ ಸಾರಾಯಿ ಕುಡಿದು ಯುವಕರು ಸಣ್ಣ ವಯಸ್ಸಿನಲ್ಲಿಯೇ ರಸ್ತೆ ಅಪಘಾತದಲ್ಲಿ, ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಹಿಳೆಯರು ವಿಧಿವೆಯರಾಗುತ್ತಿದ್ದಾರೆ. ಮಕ್ಕಳನ್ನ ಕಳಕೊಂಡು ಅದೆಷ್ಟೋ ಪಾಲಕರು ಮರುಗುತ್ತಿದ್ದಾರೆ. ಗ್ರಾಮದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆದರೆ ಕುಡಕರ ಸಂಖ್ಯೆ ಮತ್ತೆ ಹೆಚ್ಚಾಗುತ್ತದೆ. ಗ್ರಾಮದಲ್ಲಿ ಅಶಾಂತಿ ಉಂಟಾಗುತ್ತದೆ. ನಮ್ಮೂರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುದು ಬೇಡ ಪರವಾನಿಗೆ ರದ್ದುಪಡಿಸಬೇಕು “
===} ಹುಲೆಪ್ಪ ತೇಗೂರ.

(ಸಮಾಜ ಸೇವಕರು ಪಾಲಬಾವಿ)

Back to top button