ಗ್ರಾಮ ಪಂಚಾಯಿತಿಯವರ ನಿರ್ಲಕ್ಷಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿರುವ ಕೊಳವೆ ಬಾವಿ…!!
ಪ್ರಾಣ ಬಲಿ ತೆಗೆದುಕೊಳ್ಳಲು ಬಾಯಿ ತೆಗೆದು ನಿಂತಿರುವ ಕೊಳವೆ ಬಾವಿ…!!
ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ರಾಯಬಾಗ ತಾಲೂಕು ಪಾಲಬಾವಿ ಗ್ರಾಮದ ಕಾಡಶೆಟ್ಟಿ/ಯಾದವಾಡ ತೋಟದ ತರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಳೆದ 14-15 ವರ್ಷಗಳ ಹಿಂದೇ ಕೊಳವೆಬಾವಿಯನ್ನು ಕೊರೆಸಲಾಗಿತ್ತು. ಸುಮಾರು ವರ್ಷಗಳಿಂದ ಕೊಳವೆಬಾವಿಗೆ ನೀರು ಇಲ್ಲದ ಕಾರಣಕ್ಕಾಗಿ, ಕೊಳವೆಬಾವಿಯನ್ನು ತೆರೆದು ಹಾಗೆಯೇ ನಿಂತಿದೆ. ಸದ್ಯ ಬೇಸಿಗೆ ಇದ್ದ ಕಾರಣ ಮಕ್ಕಳು ಶಾಲೆ ಆವರಣದಲ್ಲಿ ಆಟವಾಡುವಾಗ ತೆರೆದ ಕೊಳವೆಬಾವಿಗೆ ಇಣುಕಿ ಇಣುಕಿ ನೋಡುವುದು ಸಾಮಾನ್ಯವಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ತೆರೆದ ಕೊಳವೆಬಾವಿ ಒಳಗೆ ಚಿಕ್ಕ ಚಿಕ್ಕ ಮಕ್ಕಳು ಬಿದ್ದು ಅನಾಹುತ ಮಾಡಿಕೊಂಡ ಘಟನೆಗಳನ್ನು ನಾವೆಲ್ಲರೂ ಕೇಳಿದ್ದೇವೆ, ನೋಡಿದ್ದೇವೆ. ಪಾಲಬಾವಿ ಗ್ರಾಮ ಪಂಚಾಯಿತಿ ಸಿಬ್ಬಂದಿಯವರ ನಿರ್ಲಕ್ಷಕ್ಕೆ ಒಳಗಾಗಿ, ಮುಂದೆ ಅನಾಹುತಕ್ಕೆ ಆವ್ಹಾನ ನೀಡುತ್ತಿರುವ ಬಾಯಿ ತೆರೆದು ನಿಂತಿರುವ ಕೊಳವೆಬಾವಿ ಎಂದರೇ ತಪ್ಪಾಗಲಾರದು.
ಬಾಕ್ಸ್ ಲೈನ್ ==
“ಪಾಲಬಾವಿ ಗ್ರಾಮದ ಕಾಡಶೆಟ್ಟಿ/ಯಾದವಾಡ ತೋಟದ ಶಾಲಾ ಆವರಣದಲ್ಲಿ ಕೊಳವೆಬಾವಿ ಬಹಳ ವರ್ಷಗಳಿಂದ ರಿಪೇರಿ ಆಗದೆ ಹಾಗೇ ಇರುವುದು ನಮ್ಮ ಗಮನಕ್ಕೆ ಬಂದಿದೆ. ಮುಂದೆ ಅನಾಹುತ ಆಗಬಾರದು ಎಚ್ಚರಿಕೆಯಿಂದ ಗ್ರಾಮ ಪಂಚಾಯತಿ ಪಿಡಿಒ ಅವರ ಜೊತೆಗೆ ಮಾತನಾಡಿ ಕೊಳವೆಬಾವಿನ್ನು ರಿಪೇರಿ ಮಾಡಬೇಕು, ಇಲ್ಲ ಅಂದ್ರೆ ಮುಚ್ಚಿಸುವ ವ್ಯವಸ್ಥೆ ಮಾಡುತ್ತೇವೆ”
===} ಆರ್. ಬಸವರಾಜಪ್ಪ
(ಬಿಇಓ ರಾಯಬಾಗ)
ಬಾಕ್ಸ್ ಲೈನ್ ==
“ಕಳೆದ 7 -8 ವರ್ಷಗಳ ಹಿಂದೆ ನಮ್ಮ ಕಾಡಶೆಟ್ಟಿ/ಯಾದವಾಡ ತೋಟದ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯಿತಿಯವರ ವಿಶೇಷ ಅನುದಾನದಲ್ಲಿ ಕೊಳವೆಬಾವಿ ಕೊರೆಸಿದರು. ಕೊಳವೆಬಾವಿ ಕೊರೆಸುವಾಗ ನೀರು ಬಂತು. ಆದರೇ ಕೆಲವು ವರ್ಷಗಳಲ್ಲಿ ನೀರು ಇಲ್ಲದಂತ್ತಾಯಿತು. ಸಧ್ಯಕ್ಕೆ ಶಾಲಾ ಮಕ್ಕಳಿಗೆ ಕಳೆದ 14-15 ವರ್ಷಗಳಿಂದ ಭೂದಾನಿ ಸುರೇಶ ಯಾದವಾಡ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಮನೋಹರ ಯಾದವಾಡ ಸಹೋದರರು ಉಚಿತವಾಗಿ ಶಾಲಾ ಮಕ್ಕಳಿಗೆ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯತಿಯವರು ನೀರಿನ ವ್ಯವಸ್ಥೆ ಮಾಡಿಸಿರುವುದಿಲ್ಲ”
===} ಮಹಾದೇವ ಮಾಠಪತಿ
(ಸ್ಥಳೀಯ ತೋಟದ ನಿವಾಸಿ, ಪಾಲಬಾವಿ)
ಬಾಕ್ಸ್ ಲೈನ್ ==
“ಕಳೆದ 4-5 ವರ್ಷಗಳ ಹಿಂದೆ ನೀರಿಲ್ಲದೆ ಬಾಳು ಬಿದ್ದಿರುವ ಕೊಳವೆಬಾವಿಯನ್ನು ಮುಚ್ಚಬೇಕು. ನೀರು ಇಲ್ಲದ ಕೊಳವೆಬಾವಿ ಮುಚ್ಚದ ಗ್ರಾಮ ಪಂಚಾಯತಿಯವರು ನಿರ್ಲಕ್ಷವು ಎದ್ದು ಕಾಣುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಗ್ರಾಮ ಪಂಚಾಯತಿಯವರೇ ಹೊಣೆಗಾರರು. ಕೂಡಲೇ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಕೆಟ್ಟು ನೀರಿಲ್ಲದೆ ಪ್ರಾಣ ಬಲಿ ತೆಗೆದುಕೊಳ್ಳಲು ಬಾಯಿ ತೆಗೆದು ನಿಂತಿರುವ ಕೊಳವೆ ಬಾವಿ ಕೊಡಲೇ ಮುಚ್ಚಿಸಬೇಕು”
===} ಅಡಿವೆಪ್ಪ ಸೊನ್ನದ
(ಸ್ಥಳೀಯ ತೋಟದ ನಿವಾಸಿ ಪಾಲಬಾವಿ)
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮನೋಹರ ಯಾದವಾಡ, ಎಸ್ಡಿಎಂಸಿ ಉಪಾಧ್ಯಕ್ಷ ಇಸಾಕ್ ಮುಜಾವರ, ಹನುಮಂತ ಚೌಗಲಾ, ಮಹಾದೇವ ಮಠಪತಿ, ಬಸಪ್ಪ ಕಾಡಶೆಟ್ಟಿ, ಪ್ರಭು ಮಾನಶೆಟ್ಟಿ, ಅಡಿವೆಪ್ಪ ಸೊನ್ನದ, ಬರಮಪ್ಪ ಮಾನಶೆಟ್ಟಿ, ಶಿವಪುತ್ರ ಮಾನಶೆಟ್ಟಿ ಇತರರು ಇದ್ದರು.******************************











