ಪ್ರಕೃತಿ ಬೆಳಗಾವಿ
*ಕಳ್ಳಭಟ್ಟಿ ಸರಾಯಿ ಮಾರಾಟ: ಓರ್ವನ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮುಚ್ಚಂಡಿ ಗ್ರಾಮದ ಗೋಕಾಕ–ಬೆಳಗಾವಿ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ರವಿ ಬಸವಣ್ಣೆ ಗುಡದೈಗೋಳ (54) ಎಂಬಾತನನ್ನು ಮಾರಿಹಾಳ ಪೊಲೀಸರು ಬಂಧಿಸಿ, 5 ಲೀಟರ್ ಸರಾಯಿ (ಮೌಲ್ಯ ರು.1,000) ಜಪ್ತಿ ಮಾಡಿದ್ದಾರೆ.
ಎಎಸ್ಐ ಬಿ.ಎಸ್. ನಾಯಿಕ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.**************************






