ಪ್ರಕೃತಿ ಬೆಳಗಾವಿ

*ಮನೆ ಕಳ್ಳತನಮಾಡಿದ ಆರೋಪಿಗಳ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ನಗರದ ವಿವೇಕಾನಂದ ಕ್ರಾಸಿನಲ್ಲಿ ಇದ್ದ ಮನೆಯೊಂದರಲ್ಲಿ ದಿ.15-10-2026 ರಂದು ರಾತ್ರಿ ಮನೆಗೆ ಹಾಕಿದ ಬೀಗ ಮುರಿದು ಬಿರುವಿನಲ್ಲಿದ್ದ 1,37,8000 ಕಿಮ್ಮತ್ತಿನ 170 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ 26 ತೊಲೆಯ ಬೆಳ್ಳಿಯ ಆಭರಣಗಳು ಹಾಗೂ ಡೈಮೆಂಡ 07 ಕಾರೇಟದ ಆಭರಣಗಳು ಹಾಗೂ 20 ಸಾವಿರ ನಗದು ಹಣ ಒಟ್ಟು 15,58000/- ರೂ ಬೆಲೆ ಬಾಳುವ ವಸ್ತುಗಳನ್ನ ಕಳ್ಳತನ ಮಾದಿದ್ದ ಆರೋಪಿಗಳನ್ನು ಗೋಕಾಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತರನ್ನು ಹಳೇಹುಬ್ಬಳಿಯ 58 ವರ್ಷದ ಕೈಸಅಹ್ಮದ @ ಬಾಬಾಜಾನ ತಂದೆ ಸಲೀಮ ಸುದರ್ಜಿ ಮತ್ತು 32 ವರ್ಷದ ಹಳೆ ಹುಬ್ಬಳ್ಳಿಯ, ಕಟನೂರ ಓಣಿಯ ಹುಸೇನಸಾಬ ಇಮಾಮಸಾಬ ಕನವಳ್ಳಿ ಎಂದು ಗುರುತಿಸಲಾಗಿದೆ.

ಬಂಧಿರಿಂದ ಬಂಗಾರದ 170 ಗ್ರಾಂ ಬಂಗಾರ.26 ತೊಲೆಯ ಬೆಳ್ಳಿಯ ಆಭರಣ ಹಾಗೂ 07 ಕಾರೇಟದ ಡೈಮಂಡ ಆಭರಣಗಳು ಹಾಗೂ 20 ಸಾವಿರ ರೂಪಾಯಿ ನಗದು ಹಣ ಸೇರಿ ಒಟ್ಟು 15,58000/-ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ ರಾಮರಾಜನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಸರಗಿ ಪೊಲೀಸ್ ಉಪಾಧೀಕ್ಷಕರಾದ ರವಿ ನಾಯಕ ಪೊಲೀಸ್ ನಿರೀಕ್ಷಕರಾದ ವಿಜಯಕುಮಾರ ಸಿನ್ನೂರ ಮಾರ್ಗದರ್ಶನದಲ್ಲಿ ಪಿಎಸ್ಐ ಕಿರಣ ಮೋಹಿತೆ,,
ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಖಚಿತವಾದ ಮಾಹಿತಿ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಗೋಕಾಕ ನಗರದ ವಿವೇಕಾನಂದ ನಗರದ ಮನೆಯಲ್ಲಿ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ.

ಬಂಧಿತ ಆರೋಪಿಗಳನ್ನು ನವೆಂಬರ 13 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ ಶ್ಲಾಘಿಸಿದ್ದಾರೆ.

ಇನ್ನು ಸದರಿ ಪ್ರಕರಣದಲ್ಲಿ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾದ dsp ರವಿ ನಾಯಕ, ಸಿಪಿಐ ವಿಜಯಕುಮಾರ ಸಿನ್ನೂರ. ಗೋಕಾಕ ಶಹರ ಠಾಣೆಯ ಪಿಎಸ್ಐ ಕಿರಣ ಮೋಹಿತೆ, ಪ್ರೊಬೆಷನರಿ ಪಿಎಸ್ಐ ಗಳಾದ ಎಸ್. ಆರ್. ಕಣವಿ,ಗೌರಿಶಂಕರ ನಿಲೂರೆ ಸಿಬ್ಬಂದಿಗಳಾದ ಎ.ಎಸ್.ಐ. ಆರ್. ಬಿ. ಹಡಪದ.
ಬಿ. ಎಸ್. ಸಿದ್ದಾಳ, ಜೆ ಎಚ್ ಗುಡ್ಲಿ.ಕೆ ಎನ್ ಇಆಗೇರ, ಎಸ್. ಎನ್. ಪತ್ತಾರ, ಮಂಜುನಾಥ, ಜ್ಞಾನೇಶ ಗದಾಡಿ,ಎ.ಎನ್.ಶಿರಗುರೆ, ಮಂಜುನಾಥ ಹುಚಗೌಡರ, ಎಸ್.ಎಸ್.ಗುಡೇರ ಹಾಗೂ ಶ್ರೀ.ತಬರೇಜ ಬಾಗವಾನ ಪಿ.ಐ. ಬೆರಳು ಮುದ್ರೆ ಘಟಕ ಹಾಗೂ ಸಚೀನ ಪಾಟೀಲ ಟೆಕ್ನಿಕಲ್‌ಸೆಲ್ ಬೆಳಗಾವಿ ಇವರ ಕಾರ್ಯವನ್ನು ಬೆಳಗಾವಿ ಎಸ್ ಪಿ ಯವರು ಶ್ಲಾಘಿಸಿರುತ್ತಾರೆ.*******************************

Leave a Reply

Your email address will not be published. Required fields are marked *

Back to top button