ಪ್ರಕೃತಿ ಬೆಳಗಾವಿ

*ಜೂಜಾಟದ ಅಡ್ಡೆ ಮೇಲೆ ಎಪಿಎಂಸಿ ಪೊಲೀಸರ ದಾಳಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕಂಗ್ರಾಳಿ ಗ್ರಾಮದ ಮಾರ್ಕಂಡೇಯ ನದಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್, ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಎಪಿಎಂಸಿ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ 14,390 ರು. ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ.
ಸಿಪಿಐ ಯು.ಎಸ್. ಅವಟಿ ಹಾಗೂ ಪಿಎಸ್‌ಐ ವಿಠಲ ಹಾವನ್ನವರ ನೇತೃತ್ವದಲ್ಲಿ ನಡೆದ ದಾಳಿ ಸಂಬಂಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.********************************

Leave a Reply

Your email address will not be published. Required fields are marked *

Back to top button