ಪ್ರಕೃತಿ ಬೆಳಗಾವಿ
*ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 70 ಸಾವಿರ ರು. ಮೌಲ್ಯದ 1.346 ಕೆ.ಜಿ. ಗಾಂಜಾ ಹಾಗೂ 1 ಲಕ್ಷ ರು. ಮೌಲ್ಯದ ಬೈಕ್ ಸೇರಿ ಒಟ್ಟು 1.70 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕೃಷ್ಣಾ ಗಜಾನನ ಪಾಟೀಲ (24) ಹಾಗೂ ರೂಪೇಶ ಸುಧೀರ ಶಿಂಧೆ (26) ಬಂಧಿತರು. ಖಾನಾಪುರದ ವಿನು ಎಂಬಾತನಿಂದ ಗಾಂಜಾ ತಂದಿರುವುದಾಗಿ ಆರೋಪಿಗಳು ತಿಳಿಸಿದ್ದು, ಮೂರನೇ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.********************************






