ಪ್ರಕೃತಿ ಬೆಳಗಾವಿ

*ಬೆಳಗಾವಿಯಲ್ಲಿ ಮಟಕಾ ಅಡ್ಡೆಗಳ ಮೇಲೆ ದಾಳಿ: ಇಬ್ಬರ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಯಳ್ಳೂರ ಹಾಗೂ ಹಿಂಡಲಗಾ ಗ್ರಾಮಗಳಲ್ಲಿ ಮಟಕಾ ಆಟದ ಮೇಲೆ ಪ್ರತ್ಯೇಕ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, 7,700 ರು. ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.

ಯಳ್ಳೂರ ಗ್ರಾಮದಲ್ಲಿ ಮಟಕಾ ಆಡುತ್ತಿದ್ದ ಮಾಳಿ ಗಲ್ಲಿಯ ನಾಗೇಶ ಮಾರುತಿ ಬೋಗಲೆ (36) ಎಂಬಾತನನ್ನು ಪಿಎಸ್‌ಐ ಸಂತೋಷ ದಳವಾಯಿ ನೇತೃತ್ವದ ತಂಡ ವಶಕ್ಕೆ ಪಡೆದು 3,580 ರು. ಜಪ್ತಿ ಮಾಡಿದೆ. ಮತ್ತೊಂದೆಡೆ, ಹಿಂಡಲಗಾ ಗ್ರಾಮದ ಸಿಂಧಿ ಕಾಲನಿಯ ಶ್ಯಾಮ ಬಬನದಾಸ ಗುಲಬಾನಿ (50) ಎಂಬಾತನನ್ನು ಪಿಎಸ್‌ಐ ವಿ.ಡಿ. ಸರನಾಯಿಕ್ ನೇತೃತ್ವದ ತಂಡ ವಶಕ್ಕೆ ಪಡೆದು 4,120 ಜಪ್ತಿ ಮಾಡಿದೆ.************************************

Leave a Reply

Your email address will not be published. Required fields are marked *

Back to top button