ಪ್ರಕೃತಿ ಬೆಳಗಾವಿ

*ನಗರ ಕೇಂದ್ರ ಗ್ರಂಥಾಲಯದಲ್ಲಿ “ಹುತಾತ್ಮರ ದಿನ” ಆಚರಣೆ:*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಕೇಂದ್ರ ಗ್ರಂಥಾಲಯದಲ್ಲಿ ಜ 30 ರಂದು “ಹುತಾತ್ಮರ ದಿನ” ಆಚರಣೆ ಮಾಡಲಾಯಿತು.ಮುಂಜಾನೆ 11 ಗಂಟೆಗೆ 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.ಪ್ರತಿ ವರ್ಷ ಜನವರಿ 30 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ಅಂಗವಾಗಿ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಈ ದಿನದಂದು ಬೆಳಗ್ಗೆ 11 ಗಂಟೆಗೆ ದೇಶಾದ್ಯಂತ ಎರಡು ನಿಮಿಷಗಳ ಮೌನ ಆಚರಿಸಲಾಗುತ್ತದೆ.

ಉಪನಿರ್ದೇಶಕರಾದ ಶ್ರೀ ರಾಮಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರಿಗೆ ಗೌರವ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಕ್ಕಾಗಿ ಪ್ರಾಣ ಅರ್ಪಿಸಿದ ಸೈನಿಕರ ತ್ಯಾಗವನ್ನು ಸ್ಮರಿಸುವುದು ಈ ದಿನದ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಗ್ರಂಥಪಾಲಕರಾದ ಎಸ್ ಎಸ್ ಸೀಮಿಮಠ, ಆನಂದ ಮುತಗಿ, ಸುಮಿತ್ ಕಾವಳೆ, ಪ್ರಕಾಶ ಇಚಲಕರಂಜಿ,ಸುನಿಲಕುಮಾರ್ ಸಂಗೀತಾ ನಾವಿ, ಇ ಎನ್ ಅಂಬೇಕರ,ಮತ್ತು ಎಲ್ಲ ಸಿಬ್ಬಂದಿ, ಓದುಗರು ಹಾಜರಿದ್ದು,ಗೌರವ ನಮನ ಸಲ್ಲಿಸಿದರು.******************************

Back to top button