ಪ್ರಕೃತಿ ಬೆಳಗಾವಿ

*ಅಂತ್ಯಗೊಂಡ ರಾಮದುರ್ಗ ರೈಲು ಹೋರಾಟ ಸಮಿತಿ ಧರಣಿ ಸತ್ಯಾಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ರಾಮದುರ್ಗ : ಮುಂಬರುವ ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡ ವರೆಗೆ ನೂತನ ರೈಲ್ವೆ ಮಾರ್ಗ ಯೋಜನೆಯನ್ನು ಅನುಷ್ಠಾನಗೊಳಿಸ ಬೇಕೆಂದು ಒತ್ತಾಯಿಸಿ ಪಟ್ಟಣದ ಹುತಾತ್ಮ ಸರ್ಕಲ್ ನಲ್ಲಿ ರಾಮದುರ್ಗ ರೈಲು ಹೋರಾಟ ಕ್ರಿಯಾ ಸಮಿತಿಯಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಅಂತ್ಯ ಕಂಡಿದೆ.

ನೈರುತ್ಯ ರೈಲ್ವೆ ವಲಯದ ಸಲಹಾ ಸಮಿತಿ ಸದಸ್ಯರಾದ ಎಫ್ ಎಸ್ ಸಿದ್ದನಗೌಡರ ಅವರು ಗುರುವಾರ ಹೋರಾಟದ ವೇದಿಕೆಗೆ ಆಗಮಿಸಿ ಶೀಘ್ರದಲ್ಲೇ ಕೇಂದ್ರ ರೈಲ್ವೆ ಸಚಿವರಿಗೆ ಭೇಟಿಯಾಗಿ ಲೋಕಾಪೂರ-ಧಾರವಾಡ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಲು ಒತ್ತಾಯಿಸುತ್ತೇವೆಂದು ಭರವಸೆ ನೀಡಿದರು. ಅವರ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ವಲಯದ ಸಲಹಾ ಸಮಿತಿ ಸದಸ್ಯರಾದ ಎಫ್ ಎಸ್ ಸಿದ್ದನಗೌಡರ ಅವರು ಮಾತನಾಡಿ “ ಲೋಕಾಪೂರದಿಂದ ಧಾರವಾಡ ರೈಲ್ವೆ ಮಾರ್ಗ ಯೋಜನೆಗೆ ಡಿಪಿಎಆರ್ ಸಿದ್ಧವಾಗಿದ್ದು. ಇದೇ ಸಾಲಿನ ಬಜೆಟ್ ನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸ ಬೇಕೆಂದು ನಮ್ಮ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಳೆದ 3 ತಿಂಗಳ ಹಿಂದೆಯೇ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ.

ಸವದತ್ತಿ ಮತ್ತು ರಾಮದುರ್ಗ ಬೆಳಗಾವಿ ಜಿಲ್ಲೆಯ ಹಿಂದುಳಿದ ತಾಲೂಕುಗಳಾಗಿದ್ದು ಸಾಕಷ್ಟು ಸೌಲಭ್ಯಗಳಿಂದ ವಂತಿರಾಗಿವೆ. ಈ ಮಾರ್ಗ ನಿರ್ಮಾಣವಾದರೆ ಈ ಭಾಗದಲ್ಲಿರುವ ಅನೇಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಕೋಟ್ಯಂತರ ಭಕ್ತರು ಅನುಕೂಲವಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಈ ರೈಲು ಮಾರ್ಗ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ನಂತರ ಗಂಗಾಧರ್ ಭೋಸಲೇ, DR K V ಪಾಟೀಲ್, ರಾಜಶೇಖರ್ ಶಲವಡಿ, ಗೈಬು ಜೈನೆಖಾನ್,ಶಫಿ ಬೆಣ್ಣಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಮದುರ್ಗ ತಾಲೂಕಾ ಅಧ್ಯಕ್ಷ DR ಕೆ ವಿ ಪಾಟೀಲ್ ಬಿಜೆಪಿ ಮುಖಂಡರು ಸರ್ವ ಸದಸ್ಯರು ಹಾಗೂ ರಾಮದುರ್ಗ ರೈಲು ಹೋರಾಟ ಸಮಿತಿಯ ಮುಖಂಡರಾದ ಪಿರಾಜಿ ಭೋಸಲೇ, ಶೇಖರ್ ಸಿದ್ದಲಿಂಗಪ್ಪನವರ, s g ಚಿಕ್ಕನರಗುಂದ, ಚಂದ್ರಕಾಂತ್ ಮಾಳದಕರ, ಎಂ ಕೆ ಯಾದವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.***************************

Back to top button