ಪ್ರಕೃತಿ ಬೆಳಗಾವಿ

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಜಿಲ್ಲೆಯ 31 ಸಾಧಕರಿಗೆ ಜಿಲ್ಲಾಡಳಿತದಿಂದ ಗೌರವ ಸನ್ಮಾನ…!!

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ ಜ.26 : ಜಿಲ್ಲಾಡಳಿತದಿಂದ 77 ನೇ ಗಣರಾಜ್ಯೋತ್ಸವದ ಅಂಗವಾಗಿ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಜಿಲ್ಲಾಡಳಿತವು ಸನ್ಮಾನಿಸಿ, ಗೌರವಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಧ್ವಜಾರೋಹಣ ನೆರವೇರಿಸಿದ ನಂತರ ಕಾರ್ಯಕ್ರಮದಲ್ಲಿ, ಸರಕಾರಿ ಸೇವೆ, ಕ್ರೀಡೆ, ಶಿಕ್ಷಣ, ಪತ್ರಿಕೋದ್ಯಮ, ಸಮಾಜ ಸೇವೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಿ, ಸನ್ಮಾನಿಸಿದರು.

ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡೆಕ್ಕನ್ ಹೆರಾಲ್ಡ ದಿನಪತ್ರಿಕೆಯ ಹಿರಿಯ ವರದಿಗಾರ ಆರ್.ಶ್ರೀನಿಧಿ, ಹಿರಿಯ ಛಾಯಾಚಿತ್ರಗ್ರಾಹಕ ಮೀಲಿಂದ ಪಿಸೆ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರ ಡಾ. ವಿಶ್ವನಾಥ ಕೋಟಿ, ಹೊಸದಿಗಂತ ದಿನಪತ್ರಿಕೆಯ ವರದಿಗಾರ ಮಾಹಾಂತೇಶ ಕಣವಿ, ಗ್ಯಾರಂಟಿ ನ್ಯೂಸ್ ಜಿಲ್ಲಾ ವರದಿಗಾರ ಶ್ರೀಧರ ಮುಂಡರಗಿ, ಪಬ್ಲಿಕ್ ಟಿವಿ ಕ್ಯಾಮರಾಮೆನ್ ಹನಮಂತ ಗುಡೆನ್ನವರ, ಸುವರ್ಣ ನ್ಯೂಸ್ ಟಿವಿ ಕ್ಯಾಮರಾಮೆನ್ ರಾಹುಲ್ ಹೂಲಿ ಅವರಿಗೆ ಸನ್ಮಾನಿಸಿದರು.

ಸರಕಾರಿ ಸೇವಾ ಕ್ಷೇತ್ರದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಬೆಟದೂರ ಗ್ರಾಮ ಪಂಚಾಯತ ಪಿಡಿಓ ಹನುಮರಡ್ಡಿ ನಾಗಾವಿ, ಕಂದಾಯ ಇಲಾಖೆಯ ಅಮ್ಮಿನಭಾವಿ ಗ್ರಾಮ ಆಡಾಳಿತ ಅಧಿಕಾರಿ ನಾಗಪ್ಪ ಮಾಲದಿನ್ನಿ, ಭೂ.ತರ್ಲಘಟ್ಟ ಗ್ರಾಮ ಆಡಳಿತ ಅಧಿಕಾರಿ ರೇಖಾ ಬಾನದ, ಸಂಶಿ ಗ್ರಾಮ ಆಡಳಿತ ಅಧಿಕಾರಿ ಚೈತ್ರಾ.ಕೆ. ಅವರಿಗೆ ಸನ್ಮಾನಿಸಿದರು.

ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಪ್ರಭು ಕುಂದರಗಿ ಹಾಗೂ ಹಿಪ್ಪರಗಿ ಸಿದ್ದರಾಮ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ನವೀನ ಕಡಾಸ್ಕರ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಪರಿಸರ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಕಾಶಗೌಡ ಕ್ಯಾಮನಗೌಡರ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಧರ ಹೊಸಮನಿ, ರಂಗನಾಥ ಎನ್., ಸಮಾಜ ಸೇವಾ ಕ್ಷೇತ್ರದ ಅಲ್ಲಾಭಕ್ಷ ಕೊಟ್ನಾಳ್ ಹಾಗೂ ಡಾ. ನಾಗಲಿಂಗ ಮರಿಗಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲೆಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವಾಗಿ ರಾಜ್ಯ ಸರಕಾರದಿಂದ ರೂ.50 ಸಾವಿರ ಡಿಬಿಟಿ ನೇರ ಜಮಾವಣೆಯ ಆದೇಶ ಪತ್ರ ಹಾಗೂ ಪ್ರಮಾಣ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ನೀಡಿದರು.

2025 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಿತ್ಯಶ್ರೀ ಹವಾಲ್ದಾರ, ದ್ವಿತೀಯ ಸ್ಥಾನ ಪಡೆದ ದಿವ್ಯಾ ರಾಮಗೇರಿ, ತೃತೀಯ ಸ್ಥಾನ ಪಡೆದ ಸೀಮ್ರಾನಬಾನು ಹುಲಗೂರ ಹಾಗೂ ಧಾರವಾಡ ಶಹರ ಶೈಕ್ಷಣಿಕ ವಲಯದಲ್ಲಿ ಪ್ರಥಮ ಸ್ಥಾನ ಪಡೆದ ತಸ್ಲೀಮಾ ರೆಹಮಾನಶಾ, ದ್ವಿತೀಯ ಸ್ಥಾನ ಪಡೆದ ಕಾವ್ಯಶ್ರೀ ಮಡಿವಾಳರ, ತೃತೀಯ ಸ್ಥಾನ ಪಡೆದ ವೈಷ್ಣವಿ ಪತ್ತಾರ ಮತ್ತು ಧಾರವಾಡ ಗ್ರಾಮೀಣ ಶೈಕ್ಷಣಿಕ ವಲಯದಲ್ಲಿ ಪ್ರಥಮ ಸ್ಥಾನ ಪಡೆದ ಈರಯ್ಯ ಹಿರೇಮಠ, ದ್ವೀತೀಯ ಸ್ಥಾನ ಪಡೆದ ಪೂರ್ಣಿಮಾ ಘಂಟಿ, ತೃತೀಯ ಸ್ಥಾನ ಪಡೆದ ಯಶೋದ ಗುರಕ್ಕನವರ ಅವರನ್ನು ಮತ್ತು ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಆಫಸೀನ್ ರಾವುತ್, ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಶಂಕರ ಹೂಗಾರ ಹಾಗೂ ನವೀನ ನಾಯಕ್ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಗೌರವಿಸಿದರು.

ಈ ಸಂದರ್ಭದಲ್ಲಿ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.******************************

Back to top button