ಕನ್ನಡ ಆಲಕ್ಷಿಸಿದರೆ ಹೆತ್ತ ತಾಯಿಯನ್ನು ಅಲಕ್ಷಿಸಿದಂತೆ ಗಂಗಾಧರ ದೊಡ್ಡವಾಡ…!!

ಪ್ರಕೃತಿ ಬೆಳಗಾವಿ ಸುದ್ದಿ : ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಹೆತ್ತ ತಾಯಿ ಎಂದು ತಿಳಿದು ಪೋಷಿಸಬೇಕು, ಕನ್ನಡವನ್ನು ಅಲಕ್ಷಿಸಿದರೆ ಹೆತ್ತ ತಾಯಿಯನ್ನು ಅಲಕ್ಷಿಸಿದಂತೆ ಕನ್ನಡ ಭಾಷೆ ಪುರಾತನ ಭಾಷೆಯಾಗಿದ್ದು ಎಲ್ಲ ಪ್ರಾದೇಶಿಕ ಭಾಷೆಗಳಿಗಿಂತ ಕಲಿಯಲು ಸರಳವಾದ ಭಾಷೆಯಾಗಿದೆ ಕನ್ನಡದ ಭಾಷೆಯು ಪ್ರಾದೇಶಿಕ ಭಾಷೆಗಳಲ್ಲಿಯೇ ವಿಶಿಷ್ಟವಾದ ಇತಿಹಾಸವನ್ನು ಹೊಂದಿದೆ ನಾವಿಂದು ಪರಭಾಷೆಯ ವ್ಯಾಮೋಹದಲ್ಲಿ ಕನ್ನಡವನ್ನು ಆಲಕ್ಷಿಸಿದರೆ ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕ ಶ್ರೀ ಗಂಗಾಧರ ದೊಡ್ಡವಾಡ ಹೇಳಿದರು.
ಕನ್ನಡದ ಗಡಿ ಜಿಲ್ಲೆ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕೆ ವೀರನಾರಿ ಕಿತ್ತೂರು ಚೆನ್ನಮ್ಮ ತಾಯಿಯ ಜನ್ಮ ಭೂಮಿ ಕಾಕತಿಯಲ್ಲಿ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ರೈತಪರ ಸೇನಾನಿ, ಗಡಿ ಕನ್ನಡ ಹೋರಾಟಗಾರ್ತಿ ಶ್ರೀ ಮತಿ ಹೇಮಾ ಕಾಜಗಾರ ರವರಿಗೆ ಜಿಲ್ಲಾ ಅಧ್ಯಕ್ಷೆ ಎಂದು ಘೋಷಿಸಿ ಆದೇಶ ಪತ್ರ ನೀಡಲಾಯಿತು, ಮಹಿಳಾ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷೆ ಶ್ರೀಮತಿ ಪ್ರಭಾವತಿ ಹಾದಿಮನಿ, ಪದಾಧಿಕಾರಿಗಳಾದ, ಕಾಕತಿ ಹಿರೇಮಠದ ಶ್ರೀ ಉದಯಕುಮಾರ ಹಿರೇಮಠ ದಂಪತಿಗಳು, ಶ್ರೀಮತಿ ಯರಾದ ಸುಮಾದೇವಿ ಹಿರೇಮಠ, ಎ ವಾಣಿಶ್ರೀ, ಅನ್ನಪೂರ್ಣ ಪಾಟೀಲ, ಜಯಶ್ರೀ ಮಠದ, ರೇಣುಕಾ ಸೂರಕೊಡೆ, ಭಾರತಿ ಚೌಗಲಾ, ನಿರ್ಮಲಾ ಸ್ವಾಮಿಯವರ, ಸಂಗೀತಾ ಮಾರಿಹಾಳ, ಮಹಾದೇವಿ ವಟಾರೆ, ಸವಿತಾ ಬಡಗುಳಿ, ಸುರೇಖಾ ತಿರಕಣ್ಣವರ,ಕವಿತಾ ಜುಟ್ಟಿ, ಶ್ರೀದೇವಿ ದಿಬ್ಬಿ, ಸುಮಂಗಲಾ ಗುಡಗನಟ್ಟಿ, ಗಂಗಮ್ಮ ಗೋಗಿ, ಸುಜಾತಾ ಕಡಬಡಿ,ಭಾರತಿ ಸದಲಗಿ, ನಾಗವ್ವ ಭಜಂತ್ರಿ, ರುದ್ರವ್ವ ಭಜಂತ್ರಿ, ವರ್ಷ ಫಿಸೆ ಮುಂತಾದವರಿಗೆ ಆದೇಶ ಪತ್ರ ವಿತರಿಸಲಾಯಿತು.******************************






