ಪ್ರಕೃತಿ ಬೆಳಗಾವಿ

ಅಭಿಮನ್ಯು ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿನಿ ರಂಜನಾ ನಾಯಕ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ಮುತ್ಯನಟ್ಟಿ ಗ್ರಾಮದ ಅಭಿಮನ್ಯು ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿನಿ ರಂಜನಾ ನಾಯಕ್ ಅವರು 69ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ 2025–26 ರಲ್ಲಿ ಜುಡೋ 36 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಪಂಜಾಬ್ ರಾಜ್ಯದ ಲೂಧಿಯಾನಾ ನಗರದಲ್ಲಿ 6/01/2026 ರಿಂದ 10/01/2026 ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ರಂಜನಾ ನಾಯಕ್ ಅವರು ಗುಜರಾತ್, ಚಂಡೀಗಢ, ರಾಜಸ್ಥಾನ್, ನವದೆಹಲಿ ಹಾಗೂ ಕೇರಳ ರಾಜ್ಯಗಳ ಸ್ಪರ್ಧಿಗಳನ್ನು ಎದುರಿಸಿ ಐದು ಸುತ್ತುಗಳಲ್ಲಿ ಐದು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಈ ಮಹತ್ವದ ಸಾಧನೆಗೆ ತರಬೇತಿದಾರರಾದ ಯಲ್ಲಪ್ಪ ಗೊರವ್ ಮತ್ತು ವಿಷ್ಣು ಗೊರವ್ ಅವರ ಶಿಸ್ತುಬದ್ಧ ತರಬೇತಿ ಪ್ರಮುಖ ಕಾರಣವಾಗಿದೆ. ರಂಜನಾ ನಾಯಕ್ ಅವರ ಸಾಧನೆಗೆ ಅಭಿಮನ್ಯು ಸ್ಪೋರ್ಟ್ಸ್ ಅಕಾಡೆಮಿ ಪಾಲಕರು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾಮೀಣ ಹಿನ್ನೆಲೆಯಿಂದ ಬಂದ ಪ್ರತಿಭಾವಂತ ಕ್ರೀಡಾಪಟುವಿನ ಈ ಸಾಧನೆ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ವಿಶ್ವಾಸ ಮೂಡಿಸಿದೆ.*********************************

Back to top button