ಹುಬ್ಬಳ್ಳಿಯ ಇನಾಂ ವೀರಾಪುರ ಮರ್ಯಾದೆ ಹತ್ಯೆ ಖಂಡಿಸಿ, ಬೃಹತ್ ಪ್ರತಿಭಟನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಹುಬ್ಬಳ್ಳಿ ತಾಲೂಕು ಇನಾಂ ವೀರಾಪುರ ಗ್ರಾಮದ ” ಸುಭಾಸ ದೊಡಮನಿ ” ಅವರ ಕುಟುಂಬದ ಮೇಲೆ ಹಲ್ಲೆ ಹಾಗೂ ಅವರ ಮಗನಾದ “ವಿವೇಕಾನಂದ ” ಅವನು ಅನ್ಯ ಜಾತೀಯ ಯುವತಿಯನ್ನು ಪ್ರೀತಿಸಿ ಮದುವೆಯಾದ ” ಮಾನ್ಯ ವಿವೇಕಾನಂದ ಅವಳನ್ನು ಮದುವೆಯಾಗಿದ್ದು, ಇದರಿಂದ ದಲಿತ ಯುವಕನನ್ನು ಮದುವೆಯಾದ ಬಗ್ಗೆ ಅವಮಾನಗೊಂಡು ಮಾನ್ಯಳ ಕುಟಂಬದವರು ಮಾರ್ಯಾದ ಹತ್ಯೆ ಮಾಡಿ ಇಡೀ ಕುಟಂಬದವರಿಗೆ ಕೊಡ್ಲಿಯಿಂದ ಕೊಚ್ಚಿ ಗಾಯಗೊಳಿಸಿ ಪೈಶಾಚಿಕ ಕೃತ್ಯ ಎಸಗಿರುತ್ತಾರೆ.
*ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ*
ನಾಳೆ:-ಗುರುವಾರ ದಿನಾಂಕ 01-01-2026 ರಂದು ಸಾಯಂಕಾಲ 4:00 ಗಂಟೆ.
*ಪ್ರತಿಭಟನೆ ಮಾರ್ಗ:-* ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ , ಚೆನ್ನಮ್ಮ ಸರ್ಕಲ್, ಡಿ.ಸಿ ಕಛೇರಿ ತೆರಳಿ ಅವರು ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು.
ಆದರಿಂದ ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ನಗರ , ಪ್ರದೇಶಗಳಲ್ಲಿ ತಾಲೂಕು, ಗ್ರಾಮಗಳಿಂದ ದಲಿತ ಸಮುದಾಯ ಮುಖಂಡರು , ಕಾರ್ಯಕರ್ತರು ಹಾಗೂ ನಮ್ಮ ಸಮುದಾಯ ಮುಖಂಡರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ತಮ್ಮಗೆ ಈ ಮೂಲಕ ತಿಳಿಸುತ್ತೇನೆ…
ಜೈ ಭೀಮ್… ಜೈ ಸಂವಿಧಾನ….
ಶ್ರೀ ಪ್ರವೀಣ ಆರ್ ಮಾದರ್
ರಾಜ್ಯಾಧ್ಯಕ್ಷರು
ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘ (ರಿ)






