ಪ್ರಕೃತಿ ಬೆಳಗಾವಿ

ಎಸ್ ಎಸ್ ಎಲ್ ಸಿ ಮಕ್ಕಳಿಗೆ ಹಿಂದಿ ವಿಷಯದ ಕಾರ್ಯಗಾರ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ :- ಶನಿವಾರ ದಿನಾಂಕ 13.12.2025 ರಂದು ನಗರದ ಪ್ರತಿಷ್ಠಿತ ಹಿಂದವಾಡಿಯ ಗೋಮಟೇಶ ಹೈಸ್ಕೂಲಿನಲ್ಲಿ ಮುಂಜಾನೆ:- 8-00 ರಿಂದ 10.30 ರ ವರೆಗೆ ಹಿಂದಿ ವಿಷಯದ Motivation ಪ್ರೇರಣಾ ಕಾರ್ಯಕ್ರಮ ವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಸುನಿಲ್ ಬ ಪಾಟೀಲ್ ಅವರ ನೇತೃತ್ವದಲ್ಲಿ ಶೈಕ್ಷಣಿಕ ವರ್ಷದ ಹಿಂದಿ ಪರೀಕ್ಷಾ ಕಾರ್ಯಗಾರ ಏರ್ಪಡಿಸಲಾಗಿತ್ತು.

ಸುಮಾರು 225 ವಿದ್ಯಾರ್ಥಿಗಳು ಭಾಗವಹಿಸಿದ್ದು ಹಿಂದಿ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎನ್ ಎಫ್ ಕಿತ್ತೂರ್ ಹಿಂದಿ ಶಿಕ್ಷಕರು ಪ್ರೇಷಿಯಸ್ ಬ್ಲಾಸಮ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಬೆಳಗಾವಿ. ಹಿಂದಿ ವಿಷಯದ ಸಮಗ್ರ ಪರೀಕ್ಷಾ ಮಾಹಿತಿ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀ ಸುನಿಲ್ ಬ ಪಾಟೀಲ್. ವಹಿಸಿದ್ದರು ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಶ್ರೀ ದುರ್ಗನ್ನವರ್ ಸರ್ ಹೊಸಮನಿ ಸರ್ ಅಭಿಲಾಷಾ ಜಿನಗೊಂಡ ಮೇಡಂ, ಸೋನಿಯಾ ಮೇಡಂ, ಇವರು ಉಪಸ್ಥಿತರಿದ್ದರು ಎಲ್ಲ ಶಿಕ್ಷಕರು ಕೂಡ ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲ ಮಕ್ಕಳು ಉತ್ತಮ ಅಂಕಗಳನ್ನು ಪಡೆಯಲು ಶುಭ ಹಾರೈಸಿದರು.*********************************

Back to top button