ಒಳಮೀಸಲಾತಿ ಮರುಪರಿಶೀಲಿಸಲು ಒತ್ತಾಯಿಸಿ 17 ರಂದು ಕೋಲಂಬೊ ಸಮುದಾಯ ಬೆಳಗಾವಿ ಚಲೋ ವಿಜಯ ಜಾಧವ…!!

ಪ್ರಕೃತಿ ಬೆಳಗಾವಿ ಸುದ್ದಿ : ವಿಜಯಪುರ : ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟಿನ ಮಾನದಂಡ ಉಲ್ಲಂಘಿಸಿ ಅವೈಜ್ಞಾನಿಕ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಮಾಡಿರುವ ಆದೇಶವನ್ನು ಪುನರ ಪರಿಶೀಲನೆ ಗೊಳಪಡಿಸಲು ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ವಿಜಯ ಜಾಧವ ರಾಜ್ಯಾಧ್ಯಕ್ಷ ಸರ್ಕಾರಕ್ಕೆ ಒತ್ತಾಯ
ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮಯ ಒತ್ತಡಕ್ಕೆ ಮಣಿದಿರುವಂತೆ ಕಾಣುತ್ತಿದೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿನ ಮಾನದಂಡ ಹಲವು ಆಯೋಗಗಳ ಶಿಫಾರಸ್ಸುಗಳನ್ನು ಧಿಕ್ಕರಿಸಿ, ರಾಜಕೀಯದ ರಾಜೀ ಪಂಚಾಯಿತಿ ನಡೆಸಿ , ಆ ಮೂಲಕ ಮೀಸಲಾತಿ ವರ್ಗೀಕರಿಸಿರುವುದು ಪರಿಶಿಷ್ಟ ಜಾತಿಯಲ್ಲಿರುವ ಭೋವಿ, ಲಂಬಾಣಿ, ಕೊರಮ, ಕೊರಚ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಮಾಡಿರುವ ಘನ ಘೋರ ಅನ್ಯಾಯವಾಗಿದೆ.
ಈಗಾಗಲೇ ಹಲವು ಆಯೋಗಗಳ ವರದಿಯಲ್ಲಿ ನಮೂದಿಸಿರುವಂತೆ ಪರಿಶಿಷ್ಟ ಜಾತಿಗಳಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಔದ್ಯೋಗಿಕವಾಗಿ ಅತಿ ಹಿಂದುಳಿದಿರುವ ಜಾತಿಗಳಿಗೆ ಒಳ ಮೀಸಲಾತಿಯಲ್ಲಿ ಪ್ರಾಧಾನ್ಯತೆ ನೀಡಬೇಕಾದ ಘನ ಸರ್ಕಾರ, ಆ ಜಾತಿಗಳ ಮೇಲೆಯೆ ಗದಪ್ರಹಾರ ನಡೆಸಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ತಿಲಾಂಜಲಿ ನೀಡಿದಂತಾಗಿದೆ. ಹಾಗಾಗಿ, ಶಾಸನಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಸಮುದಾಯ ಒತ್ತಾಯವನ್ನು ಮಾಡುತ್ತದೆ. ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದಲ್ಲಿ ನೀಡಿರುವ ಮಾನದಂಡಗಳ ಪಾಲನೆಯಾಗಬೇಕು ಹಾಗೂ ಬಹು ಮುಖ್ಯವಾಗಿ “ಪ್ರಾಯೋಗಿಕ ದತ್ತಾಂಶಗಳ” (ಎಂಪೆರಿಕಲ್ ಡಾಟಾ) ಸಂಗ್ರಹಣೆ ಮಾಡಿ, ಈ ದತ್ತಾಂಶದ ಆಧಾರದ ಮೇಲೆ ಮೀಸಲಾತಿ ವರ್ಗೀಕರಣ ಆಗಬೇಕು.
ಒಳ ಮೀಸಲಾತಿ ಆದೇಶದಿಂದ ಜಾರಿಗೊಂಡಿರುವ ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿರುವ ‘ರೋಸ್ಟರ್ ಬಿಂದು’ ಪದ್ದತಿಯಿಂದ’ ಸಿ’ ಗುಂಪಿನಲ್ಲಿ ಬರುವ ಜಾತಿಗಳಿಗೆ ಅನ್ಯಾಯವಾಗುತ್ತಿರುವುದರಿಂದ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಜಾತಿಗಳಿಗೂ ಸಮಾನವಾಗಿ ಹುದ್ದೆಗಳ ಹಂಚಿಕೆಯಾಗುವಂತೆ ರೋಸ್ಟರ್ ಬಿಂದು ಮಾರ್ಪಡಿಸಿ ‘ಏಕಗವಾಕ್ಷಿ’ (ಸಿಂಗಲ್ ವಿಂಡೋ) ಪದ್ಧತಿ ಜಾರಿಗೆ ಸರ್ಕಾರ ಮುಂದಾಗಬೇಕು. ಹಲವು ಆಯೋಗಗಳ ವರದಿಯಲ್ಲಿ ನಮೂದಿಸಿರುವಂತೆ ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1 ರಷ್ಟು ಮೀಸಲಾತಿ ಹೆಚ್ಚಿಸಿ, ‘ಸಿ’ ಗುಂಪಿನಿಂದ ಪ್ರತ್ಯೇಕಿಸಬೇಕು. ಹಾಗೂ ಮೀಸಲಾತಿ ಹೆಚ್ಚಳ ಮಾಡುವುದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು.
ಸ್ಪೃಶ್ಯ- ಅಸ್ಪೃಶ್ಯ ಎಂಬ ಅಸಂವಿಧಾನಿಕ ಪದ ನ್ಯಾ.ನಾಗಮೋಹನದಾಸ್ ವರದಿ ಹಾಗೂ ಶಾಸನ ಸಭೆಯಲ್ಲಿ ಬಳಕೆ ಆಗಿರುವುದರಿಂದ ಈ ಪದಗಳನ್ನು ಸರ್ಕಾರಿ ಕಡಿತದಿಂದ ತೆಗೆದು ಹಾಕಬೇಕು ಹಾಗೂ ಭೋವಿ, ಲಂಬಾಣಿ, ಕೊರಚ, ಕೊರಮ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯದವರಿಗೆ ದಮನಿತ, ಶೋಷಿತ ಹಾಗೂ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು.ಪ್ರಸ್ತುತ ಖಾಸಗಿ ವಲಯದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿರುವುದರಿಂದ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಮೇಲಿನ ಅಂಶಗಳನ್ನು ಸರ್ಕಾರ ಸರಿಯಾಗಿ ಗ್ರಹಿಸದೆ ತರಾತುರಿಯಲ್ಲಿ ಮೀಸಲಾತಿ ವರ್ಗೀಕರಿಸಿರುವ ಸರ್ಕಾರಿ ಆದೇಶ ಹೊರಡಿಸಿರುವುದು ಪರಿಶಿಷ್ಟ ಜಾತಿಯಲ್ಲಿರುವ ಇತರೆ ಜಾತಿಗಳಿಗೆ ಮಾಡಿರುವ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ತಾವುಗಳು ಚರ್ಚಿಸಿ, ಎಲ್ಲಾ ಜಾತಿಗಳಿಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕೆಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಕರ್ನಾಟಕ ಆಗ್ರಹ ಮಾಡುತ್ತದೆ.**********************************






