ರಾಯಬಾಗ ತಾಲೂಕಿನ ಜನರ ಬಹು ದಿನಗಳ ಬೇಡಿಕೆ ಇಂದು ಈಡೇರಿಕೆ: ಸಚಿವ ಸತೀಶ್ ಜಾರಕಿಹೊಳಿ…!!

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ನೆನೆಗುದಿಗೆ ಬಿದ್ದಿರುವ ಕೆರೆತುಂಬುವ ಯೋಜನೆ ಕೈಗೆತ್ತಿಕೊಂಡು ಇಂದು ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲವಾಗಲೆಂದು ಸಾಂಕೇತಿಕವಾಗಿ ಇಂದು ಚಾಲನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ರಾಯಬಾಗ ತಾಲೂಕಿನ 39 ಕೆರೆಗಳಿಗೆ ನೀರು ತುಂಬುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿ, ಕಳೆದ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಮಂಜೂರಾದ ಕಾಮಗಾರಿ ಮತ್ತೆ ಸಿದ್ದರಾಮಯ್ಯ ಸರ್ಕಾರ ಬಂದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ನಾನು ಉಸ್ತುವಾರಿ ಸಚಿವನಾದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿ ಕೆಲಸ ಕೈಗೆತ್ತಿಗೊಳ್ಳಲಾಯಿತು. ರೈತರ ಜಮೀನು, ಕೆಇಬಿ ಸೇರಿದಂತೆ ಹಲವು ಅಡತಡೆಗಳು ಎದುರಾದವು. ಅಂತಹ ಸಂದರ್ಭದಲಿ ಸರಕಾರದ ಮಟ್ಟದಲ್ಲಿ ಬಗೆಹರಿಸಿ ಇಂದು ಬಹುಜನರ ಕನಸ್ಸು ನನಸಾಗಿದೆ. ಇಂದು ಸಾಕೇತಿಕವಾಗಿ ಕಾಮಗಾರಿಗೆ ಚಾಲನೆನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ನಾಯಕರನ್ನು ಕರೆತಂದು ಚಾಲನೆ ನೀಡಲಾಗುವುದು ಎಂದರು.
ಸಾಂಕೇತಿಕವಾಗಿ ಚಾಲನೆ ನೀಡುವ ಮೊದಲು ಕಳೆದ ಒಂದು ವಾರದಿಂದ ನೀರು ಹಾಗೂ ಸ್ಥಳಗಳನ್ನು ಪರಿಶೀಲನೆಯನ್ನು ಅಧಿಕಾರಿಗಳು, ಗುತ್ತೆಗೆದಾರರು ಮಾಡಿದ್ದಾರೆ. ಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಇಷ್ಟು ತರಾತುರಿಯಲ್ಲಿ ಮಾಡುವುದಕ್ಕೆ ಮುಂದಿನ ದಿನಗಳಲ್ಲಿ ಕೃಷ್ಣಾನದಿಯಲ್ಲಿ ನೀರಿನ ಅಭಾವ ಆಗುವ ಮೊದಲೆ ಪರಿಶೀಲಿಸಲಾಗಿದೆ. ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಈ ಯೋಜನೆ ಕಾಮಗಾರಿ ಸ್ಥಗಿತಗೊಂಡಿದ್ದು ಎಲ್ಲ ರೈತರಿಗೂ ಚಿಂತೆಗೇಡು ಮಾಡಲಾಗಿತ್ತು. ಈ ಕುರಿತು ಅಧಿವೇಶನದಲ್ಲಿ ಧ್ವನಿಯೂ ಎತ್ತಿ ಸರಕಾರದ ಗಮನ ಸೆಳೆದಿದ್ದು, ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಇಂದು ಚಾಲನೆ ದೊರಕಿದ್ದು ಸಂತವಾಗಿದೆ ಎಂದರು.
ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ನೆನೆಗುದಿಗೆ ಬಿದ್ದಿರುವ ಕಾಮಗಾರಿ ಕೈಗೆತ್ತಿಕೊಂಡು ಇಂದು ಅದ್ದೂರಿಯಾಗಿ ಚಾಲನೆ ನೀಡಿದ್ದು ಸಂತಸದ ವಿಷಯ. ಇದರ ಸದುಪಯೋಗ ಎಲ್ಲ ರೈತರು ತೆಗೆದುಕೊಳ್ಳಬೇಕು. ಎಲ್ಲ ಕೆಲಸ ಬದಿಗಿಟ್ಟು ಈ ಯೋಜನೆಜಾರಿಗೆ ತಂದಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದಿಸಲಾಗುವುದು ಎಂದರು.
ಇದೇ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ದುರ್ಯೋಧನ ಐಹೊಳೆ ಅವರನ್ನು ವಿವಿಧ ಗ್ರಾಮಸ್ಥರು ಹಾಗೂ ಮುಖಂಡರು ಹೂ, ಹಾರ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಹಾವೀರ ಮೊಹಿತೆ, ಡಾ. ಎನ್ ಎ ಮಗದುಮ್, ನಿರ್ಮಲಾ ಪಾಟೀಲ, ಸಿದ್ದಾರೂಢ ಬಂಡಗರ, ಜ್ಯೋತಿ ಕೆಪ್ಪಟ್ಟಿ,ತಾತ್ಯಾಸಾಹೇಬ್ ಕಾಟೆ, ಅರ್ಜುನ್ ನಾಯಿಕವಾಡಿ, ರಾಜಶೇಖರ ಖನದಾಳೆ, ದಿಲೀಪ್ ಜಮಾದಾರ, ಹಾಜಿ ಮುಲ್ಲಾ, ಅನೀಲ ಹಂಜೆ, ಸತ್ಯಪ್ಪ ಭಿಷ್ಠೆ, ಅನ್ನಾಸಾಹೇಬ್ ಖೆಮಲಾಪುರೆ, ನಾಮದೇವ ಕಾಂಬಳೆ, ಅಣ್ಣಪ್ಪ ಭೂವಿ, ಸಿದ್ದಪ್ಪಾ ಮರ್ಯಾಯಿ, ಸಿದ್ರಾಮ ಪೂಜೇರಿ, ಎಇ ಮದುಕರ ಪೇಡಣೇಕರ, ನೀರಾವರಿ ಇಲಾಖೆ ಎಇಇಗಳಾದ ಗಿರಿಮಲ್ ಕಮಲಾಕರ, ಆನಂದ ಕುಂಬಾರ, ಕೆಇಬಿ ಇಇ ಎಸ್ ವೈ ಸಂಗಮನಿ, ಎಇಇ ಎಸ್ ಆರ್ ಮಾನೆ, ಜೆಇ ಎಂ ಡಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.*******************************






