ಪ್ರಕೃತಿ ಬೆಳಗಾವಿ
25 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬಾಳೇಕುಂದ್ರಿ ಕೆ.ಎಚ್ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಎರಡನೇ ಹಂತದ 25 ಲಕ್ಷ ರೂ,ಗಳ ಚೆಕ್ಕನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಸಂಜೆ ದೇವಸ್ಥಾನ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು.
ಈ ವೇಳೆ ವಸಂತರಾವ ಜಾಧವ್, ನಿಲೇಶ್ ಚಂದಗಡ್ಕರ್, ಬಾಬು ಧರೆಣ್ಣವರ, ಬಾಳಪ್ಪಾ ಹೊಳೆನ್ನವರ, ಲಲ್ಲುಗೌಡ ಪಾಟೀಲ, ಸಂತೋಷ ಕುಂಬಾರ, ವಿಠ್ಠಲ ಕುರಬರ, ರಾಕೇಶ್ ಬುರಡ, ಮಾರುತಿ ಸುಳಗೇಕರ ಹಾಗೂ ಗ್ರಾಮದ ಅನೇಕರು ಉಪಸ್ಥಿತರಿದ್ದರು.********************************






