ಕನ್ನಡ ಭವನ ನಿರ್ವಹಣೆ ಸಮಿತಿಯನ್ನು ರಚಿಸಿದ ಜಿಲ್ಲಾಧಿಕಾರಿಗಳನ್ನು ಕನ್ನಡ ಸಂಘಟನೆಗಳ ಮುಖಂಡರು ಸನ್ಮಾನಿಸಿದರು…!!

ಪ್ರಕೃತಿ ಬೆಳಗಾವಿ ಸುದ್ದಿ : ರಾಜ್ಯ ಸರಕಾರದ ಅನುದಾನದಲ್ಲಿ ಬೆಳಗಾವಿಯ ನೆಹರು ನಗರದಲ್ಲಿ ನಿರ್ಮಿಸಲಾದ ” ಕನ್ನಡ ಭವನ “ವನ್ನು ಬೆಳಗಾವಿ ಜಿಲ್ಲಾಡಳಿತವು ತನ್ನ ವಶಕ್ಕೆ ತೆಗೆದುಕೊಂಡಿದ್ದು ಕನ್ನಡ ಸಂಘಟನೆಗಳಿಗೆ, ಸಾಹಿತ್ತಿಕ ಚಟುವಟಿಕೆಗಳಿಗೆ ರಂಗ ಚ ಟುವಟಿಕೆಗಳಿಗೆ ಕಡಿಮೆ ಬಾಡಿಗೆಯಲ್ಲಿ ನೀಡಲಾಗುವದು.
ಎಂದು ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮೊಹ್ಮದ ರೋಷನ್
ಅವರು ಶುಕ್ರವಾರ ಮುಂಜಾನೆ ಕನ್ನಡ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದರು. ಖಾಸಗಿ ಸಂಘವೊಂದರ ವಶದಲ್ಲಿದ್ದ ಕನ್ನಡ ಭವನವನ್ನು ವಶಕ್ಕೆ ತೆಗೆದುಕೊಂಡು ಕನ್ನಡ ಭವನ ನಿರ್ವಹಣೆ ಸಮಿತಿಯನ್ನು ರಚಿಸಿದ ಜಿಲ್ಲಾಧಿಕಾರಿಗಳನ್ನು ಕನ್ನಡ ಸಂಘಟನೆಗಳ ಮುಖಂಡರು ಶುಕ್ರವಾರ ಮುಂಜಾನೆ ಸನ್ಮಾನಿಸಿ ಅಭಿನಂದಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಈ ಭರವಸೆ ನೀಡಿದರು.
ಖಾಸಗಿ ಸಂಘವು ನಡೆಸಿದ ಆರ್ಥಿಕ ವ್ಯವಹಾರಗಳ ತಪಾಸಣೆ ನಡೆದಿದೆ. ಸಂಘವು ಹೊಂದಿದ್ದ ಎರಡು
ಬ್ಯಾಂಕ್ ಖಾತೆಗಳನ್ನು ಫ್ರಿಜ್ ಮಾಡಲಾಗಿದೆ. ತಮ್ಮ ಅಧ್ಯಕ್ಷತೆಯ ನಿರ್ವಹಣೆ ಸಮಿತಿಯು ಕನ್ನಡ ಭವನದ ಎಲ್ಲ ಚಟುವಟಿಕೆಗಳನ್ನು ನಡೆಸಲಿದೆ ಎಂದು ಮೊಹ್ಮದ್ ರೋಷನ್ ಅವರು ಕನ್ನಡ ಸಂಘಟನೆಗಳಿಗೆ ತಿಳಿಸಿದರು.
ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಕರ್ನಾಟಕ ರಕ್ಷಣಾ ವೇದಿಕೆ ( ಶಿವರಾಮೇಗೌಡ ಬಣ ) ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ ) ಜಿಲ್ಲಾಧ್ಯಕ್ಷ ಆರ್. ಅಭಿಲಾಷ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹಿರಿಯ ಉಪಾಧ್ಯಕ್ಷ ಮೈನೋದ್ದೀನ್ ಮಕಾನದಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಸಂತೋಷ ಮಾಸೇನಟ್ಟಿ, ರಾಜೇಶ ಕೋನನ್ನವರ, ಶರೀಫ ಸನದಿ, ಸಲೀಮ್ ಖಲೀಲ, ಎಸ್. ಎಸ್. ಮೂಕನವರ, ನಾಗೇಶ ಕೊಪ್ಪದ, ಕಸ್ತೂರಿ ಭಾವಿ
ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದು
ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು.*******************************






