ಪ್ರಕೃತಿ ಬೆಳಗಾವಿ

ಭಾರತದ ಸಂವಿಧಾನ ಜಗತ್ಪ್ರಸಿದ್ಧವಾಗಿದೆ: ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ರಾಹುಲ್‌ ಜಾರಕಿಹೊಳಿ…!!

ಡಾ. ಬಿ.ಆರ್.‌ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಂವಿಧಾನ ಪೀಠಿಕೆ ಓದಿ ಸಂವಿಧಾನ ದಿನ ಆಚರಣೆ…

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ದೇಶಕ್ಕಾಗಿ ಡಾ. ಬಿ.ಆರ್.‌ ಅಂಬೇಡ್ಕರ್ ಅವರು ಸಲ್ಲಿಸಿದ ಸೇವೆ ಅಪ್ರತಿಮ. ದೇಶಕ್ಕೆ ಅವರು ನೀಡಿದ ಸಂವಿಧಾನ ಜಗತ್ಪ್ರಸಿದ್ಧವಾಗಿದೆ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ, ಕಾಂಗ್ರೆಸ್‌ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಭಾರತೀಯ ಸಂವಿಧಾನವು ಜಾರಿಗೆ ಬಂದು 75 ವರ್ಷ ಪೂರ್ಣಗೊಂಡ ಸ್ಮರಣಾರ್ಥ ಡಾ. ಬಿ.ಆರ್.‌ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಂವಿಧಾನ ಪೀಠಿಕೆ ಓದಿ ಸಂವಿಧಾನ ದಿನ ಆಚರಿಸಿ ಅವರು ಮಾತನಾಡಿದರು.

ಸಾರ್ವಜನಿಕರು ನಮ್ಮ ದಿನನಿತ್ಯದ ಜೀವನದಲ್ಲಿ ನೆಮ್ಮದಿಯ ಜೀವನ ನಡೆಸಲು ಅನುಕೂಲವಾದ ವಾತಾವರಣವನ್ನು ಸಂವಿಧಾನವು ಒದಗಿಸಿದ್ದು, ಸಂವಿಧಾನದ ತತ್ವಗಳು ಮತ್ತು ಮಹತ್ವದ ಬಗ್ಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅರಿಯುವುದು ಮತ್ತು ಜಾಗೃತರಾಗಿರುವುದು ಅತ್ಯಂತ ಅಗತ್ಯವಾಗಿದೆ ಎಂದರು.

ನಮ್ಮ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳ ಬಗ್ಗೆ ದೇಶದ ಎಲ್ಲಾ ನಾಗರೀಕರು ತಿಳಿದುಕೊಳ್ಳುವ ಮೂಲಕ ಸಂವಿಧಾನದ ಅತೀ ಮುಖ್ಯವಾದ ಮಹತ್ವವನ್ನು ಅರಿಯಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವೇಕ್ ಜತ್ತಿ, ಪಾಂಡು ಮಣಿಕೇರಿ, ವಿಠಲ್‌ ಪರಸನ್ನವರ್, ಆರೀಫ್ ಪೀರಜಾದೆ, ತೋಳಿ ಭರಮಣ್ಣ ಹಾಗೂ ಇತರರು ಇದ್ದರು.************************************

Back to top button