ಪ್ರಕೃತಿ ಬೆಳಗಾವಿ

ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಾಜ್ಯದಲ್ಲಿ ಸರಕಾರದಿಂದ ಸುಮಾರು 18 ಸಾವಿರ ನರ್ಸರಿ ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ ತೆರೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಹೇಳಿದರು. ಕುವೆಂಪು ನಗರದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಅವರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಡಿ ಬೆಳಗಾವಿ ಗ್ರಾಮೀಣ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ ವಿತರಿಸಿದರು .

ನೇಮಕಾತಿ ಆದೇಶ ಪ್ರತಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ ಸ್ಪರ್ಧಾತ್ಮಕ ಯುಗದಲ್ಲಿ ನರ್ಸರಿ ಶಾಲೆಗೆ ಸಾವಿರಾರು ಹಣ ಕೊಡುತ್ತಾರೆ. ಆದರೆ ಅಂಗನವಾಡಿಯಲ್ಲಿ ಯಾವುದೇ ಹಣ ಇಲ್ಲದೆ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಿ ಸದೃಢ ಮಾಡುವ ಕೆಲಸ ಕರ್ನಾಟಕ ಸರಕಾರ ಮಾಡುತ್ತಿದೆ ಅಂಗನವಾಡಿ ಬದಲಾವಣೆ ಮಾಡಲಾಗುತ್ತಿದೆ. 18 ಸಾವಿರ ಎಲ್ ಕೆಜಿ ಯುಕೆಜಿ ಸರಕಾರಿ ಶಾಲೆ ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಇದರಲ್ಲಿ 300 ಎಲ್ ಕೆಜಿ ಗಳನ್ನು ಗ್ರಾಮೀಣ ಮತಕ್ಷೇತ್ರದಲ್ಲಿ ಸ್ಥಾಪನೆ ಮಾಡಲಾಗುವುದು ಎಂದರು.

ಕಳೆದ 1974ರಲ್ಲಿ ಇಂದಿರಾಗಾಂಧಿ ಅವರು ಆರಂಭಿಸಿರುವ ಅಂಗನವಾಡಿಗೆ ಮುಂದಿನ ವರ್ಷ ಅಮೃತ ಮಹೋತ್ಸವ ಆಚರಣೆ ಮಾಡಲಾಗುವುದು ಎಂದು ಹೇಳಿದ್ದರು ನಾನು ಸಚಿವೆಯಾಗಿರುವ ಇಲಾಖೆಯಲ್ಲಿ ನನ್ನ ಗ್ರಾಮೀಣ ಮತಕ್ಷೇತ್ರದಲ್ಲಿ ಸುಮಾರು 50 ಜನ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಸರಕಾರದ ಆದೇಶ ಪತ್ರ ವಿತರಣೆ ಮಾಡಿದ್ದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು . ಹೊಸದಾಗಿ ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆರು ಇನ್ ನ್ಯೂಸ್ ನೊಂದಿಗೆ ಮಾತನಾಡಿ ಎಂಬಿಎ ಮುಗಿಯಿಸಿ ಸರ್ಕಾರಿ ಉದ್ಯೋಗ ಹುಡುಕುತ್ತೀದ ಸಣ್ಣ ಮಟ್ಟದಿಂದ ದೊಡ್ಡ ಮಟ್ಟಕ್ಕೆ ಕನಸು ಇದೆ, ಮಕ್ಕಳನ್ನು ನೋಡಿ ಕೊಳ್ಳುವುದರಲ್ಲಿ ತುಂಬಾನೇ ಖುಷಿವಿದೆ ಎಂದು ಹೇಳಿದ್ದರು .

ಅಂಗನವಾಡಿ ಸಹಾಯಕಿ ಹುಲ್ಲರೂ ಮಾತನಾಡಿ ನಮ್ಮ ಮನೆ ಯಜಮಾನರು ತೀರಿಕೊಂಡು ಒಂದು ವರ್ಷವಾಯಿತು, ನನಗೆ ಮಗನು ಇದ್ದಾನೆ ಹಾಗಾಗಿ ಉದ್ಯೋಗ ಹುಡುಕುತ್ತೀದೆ, ಈಗ ಲಕ್ಷ್ಮೀ ಹೆಬ್ಬಾಳ್ಳರ ಅವರ ಆರ್ಶೀವಾದ ದಿಂದ ಉದ್ಯೋಗ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.**************************

Back to top button