ನಿಜಪ್ಪ ಹಿರೇಮನಿಗೆ ಕನಕ ಪ್ರಶಸ್ತಿ…!!
ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡದ ನುಡಿ ಸಡಗರದಲ್ಲಿ ನಿಜಪ್ಪ ಹಿರೇಮನಿ ಅವರಿಗೆ ಕನಕ ಪ್ರಶಸ್ತಿ ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಚೇತನ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನುಡಿ ಸಡಗರ ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಗೌರವ ಸನ್ಮಾನ ನೆರವೇರಿಸಲಾಯಿತು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೃಪಾ ಆರೋಗ್ಯ ಸೇವಾ ಸಂಸ್ಥೆಯ ನಿಜಪ್ಪ ಹಿರೇಮನಿ,ಸೀತಾ ಚಪ್ಪರ,ನಂದಕುಮಾರ ಚಂದರಗಿ,ಬಾಬು ದೊಡ್ಡಮನಿ,ಎಂ ಎಂ ಅತ್ತಾರ,ಬಸವರಾಜ ಉಪ್ಪಾರಟ್ಟಿ ಸೇರಿದಂತೆ ಹಲವರಿಗೆ ಧಾರವಾಡದಲ್ಲಿ ಇಂದು ಕನಕ ಪ್ರಶಸ್ತಿಯ ಗೌರವ ಸನ್ಮಾನ ನೆರವೇರಿತು.
ಮೂರು ದಿನಗಳ ಕಾಲ ನಡೆಯುವ ನುಡಿಸಿರಿಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೋ ಕೆ ಬಿ ಗುಡಸಿ ಕಾರ್ಯಕ್ರಮ ಉದ್ಘಾಟಿಸಿದರೆ ಕನ್ನಡ ನುಡಿ ಚಿಂತಕರು,ಕಲಾವಿದರು,ಸಾಹಿತ್ಯ, ಶಿಕ್ಷಣ,ರಂಗಭೂಮಿ, ಸಿನೆಮಾ ಗೋಷ್ಠಿ ಸೇರಿದಂತೆ ಹಲವು ಕಾರ್ಯಕ್ರಮ ಗಳು ಜರುಗಿದವು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಎ ಚೆನ್ನಬಸಪ್ಪ,ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜ ಅಂಗಡಿ, ಸಾಹಿತಿ ಹಾಗೂ ಧಾರವಾಡ ಆಕಾಶವಾಣಿ ನಿರ್ದೇಶಕ ಬಸು ಬೇವಿನಗಿಡದ,ರೈತಪರ ಹೋರಾಟಗಾರ ಎಂ ಬಸವರಾಜ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಅಧ್ಯಕ್ಚತೆಯನ್ನು ಸಾಹಿತಿ ಹಾಗೂ ಬೆಳಗಾವಿ ತೆರಿಗೆ ಅಧಿಕಾರಿ ಸುರೇಶ ಕಾರಕೊಪ್ಪ ವಹಿಸಿದ್ದರೆ ಡಾ ಹನುಮಗೌಡ ಸಿ ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಚೇತನ ಪೌಂಢೇಶನ್ ಸಂಚಾಲಕಿ ಜ್ಯೋತಿ ಗೌರಿ ನಡೆಸಿಕೊಟ್ಟರು.
ನೂರಾರು ಅನಾಥ ಮಕ್ಕಳ ಪಾಲನೆ,ಪೋಷಣೆ ಮತ್ತು ಶಿಕ್ಷಣದ ಮೂಲಕ ಊಟ ವಸತಿ ಒದಗಿಸಿ ಸಮಾಜ ಸೇವೆ ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ಗಡಿ ತಾಲೂಕಿನ ಸಮಾಜ ಸೇವಕ ನಿಜಪ್ಪ ಹಿರೇಮನಿ ಅವರನ್ನು ಗುರುತಿಸಿ ಗೌರವಿಸಿದ್ದು ಅಥಣಿ ತಾಲೂಕಿನ ಹೆಮ್ಮೆಯಾಗಿದೆ ಎಂದು ಯುವ ಕನ್ನಡಪರ ಹೋರಾಟಗಾರರು ಅಭಿನಂದಿಸಿದ್ದಾರೆ.**************************






