ಪ್ರಕೃತಿ ಬೆಳಗಾವಿ

ಲಕ್ಷ್ಮೇಶ್ವರ ತಾಲೂಕು ದಲಿತ ನೌಕರರ ಒಕ್ಕೂಟ ರಚನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಕರ್ನಾಟಕ ದಲಿತ ನೌಕರರ ಒಕ್ಕೂಟ ಗದಗ್ ಜಿಲ್ಲಾ ವತಿಯಿಂದ ಇಂದು ದಿನಾಂಕ 20.07.2024ರಂದು ಲಕ್ಷ್ಮೇಶ್ವರದ ಪ್ರವಾಸಿ ಮಂದಿರದಲ್ಲಿ ತಾಲೂಕ ದಲಿತ ನೌಕರರ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ವೇಳೆ ಕರ್ನಾಟಕ ರಾಜ್ಯ ಡಿಎಸ್ಎಸ್ ಸಂಚಾಲಕರಾದ ಹಾಗೂ ಗದಗ್ ಜಿಲ್ಲಾ ದಲಿತ ನೌಕರರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷರಾದಂತಹ ಶ್ರೀ ಎಸ್ ಎನ್ ಬಳ್ಳಾರಿ ಸರ್ ಮತ್ತು ಜಿಲ್ಲಾಧ್ಯಕ್ಷರಾದಂತಹ ಶ್ರೀ ಚಂದ್ರಶೇಖರ್ ಮೇಲಿನಮನಿ ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಮುತ್ತು ಮಾದರ್ ರವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕ ದಲಿತ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಶ್ರೀ ಆನಂದ್ ಕುಮಾರ್ ನಾಗಪ್ಪ ಮುಳುಗುಂದ್ ಉಪಾಧ್ಯಕ್ಷರಾಗಿ ಶ್ರೀ ಹನುಮಂತ ಮ್ಯಾಟ್ಟಣ್ಣವರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶೇಖಣ್ಣ ಡಿ ಲಮಾಣಿ. ಸಹ ಕಾರ್ಯದರ್ಶಿಯಾಗಿ ಶ್ರೀ ಸೋಮಶೇಖರ್ ಲಕ್ಷ್ಮೇಶ್ವರ್ ಖಜಾಂಚಿಯಾಗಿ ಶ್ರೀ ಆರ್ ಹೆಚ್ ನರೇಗಲ್ ಸರ್ ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಪರಶುರಾಮ್ ವೈ ಆಯ್ಕೆಯಾಗಿದ್ದಾರೆ ಎಂದು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.**********************

Back to top button