ಪ್ರಕೃತಿ ಬೆಳಗಾವಿ
ಇಂದು ಬೆಳಗಾವಿಗೆ ಕೃಷಿ ಸಚಿವರ ಬೇಟಿ ಹಾಗೂ ಕಾರ್ಯಕರ್ತರ ಸಭೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಇಂದು ದಿನಾಂಕ 26/06/2024 ರಂದು ಮುಂಜಾನೆ 10:00 ಗಂಟೆಗೆ ಸರಿಯಾಗಿ ಮಾನ್ಯ ಕೃಷಿ ಸಚಿವರಾದ ಸನ್ಮಾನ್ಯ ಶ್ರೀ ಎನ್ ಚಲುವರಾಯಸ್ವಾಮಿ ರವರು ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಯ “ಕಾಂಗ್ರೆಸ್ ಭವನ” ಕ್ಕೆ ಬೇಟಿ ನೀಡಲಿದ್ದಾರೆ.
ಆದ ಕಾರಣ ಕಾಂಗ್ರೆಸ್ ಪಕ್ಷದ ಕಿಸಾನ್ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಪ್ಪದೇ ಈ ಸಭೆಗೆ ಹಾಜರಾಗಿ ತಮ್ಮ ಸಮಸ್ಯೆಗಳಿಗೆ ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ನೀಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಈ ಮೂಲಕ ಕೋರುತ್ತಿದ್ದೇನೆ.
ಧನ್ಯವಾದಗಳೊಂದಿಗೆ ,
*ಶ್ರೀ ಕಲ್ಲಪ್ಪಾ ಲಕ್ಕಾರ.
ಅಧ್ಯಕ್ಷರು ,*
ಬೆಳಗಾವಿ ಜಿಲ್ಲಾ ಗ್ರಾಮೀಣ ಕಿಸಾನ್ ಕಾಂಗ್ರೆಸ್ ಸಮಿತಿ.






