ಪ್ರಕೃತಿ ಬೆಳಗಾವಿ

ನಗರದಲ್ಲಿ ಹೆಚ್ಚುತ್ತಿದೆ ಮೊಬೈಲ್ ಕಳ್ಳತನ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಗೋಕಾಕ ನಗರದ ಬಸ್ ನಿಲ್ದಾಣದಲ್ಲಿ ಮಾರ್ಕೆಟ್ ಹತ್ತಿರ ಬಡಾವಣೆ ಸಮೀಪ ಮೊಬೈಲ್​ ಕಳ್ಳತನ ಹೆಚ್ಚಿದೆ. ರಸ್ತೆಯಲ್ಲಿ ಸಂಚರಿಸುತ್ತಿರುವ ಪಾದಚಾರಿಗಳಿಂದ ಮೊಬೈಲ್ ಕದಿಯುವ ಘಟನೆಗಳು ಪುನರಾವರ್ತನೆ ಆಗುತ್ತಿವೆ.

ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಘಟಿಸುತ್ತಿದೆ. ಬಸ್ ನಿಲ್ದಾಣ ಮಾರ್ಕೆಟ್ ಚಿತ್ರ ಮಂದಿರ
ಫೋನ್ ಕಳ್ಳತನ ಪ್ರಕರಣಗಳು ನಡೆದಿವೆ. ಕಳೆದ ಹಲವು ದಿನಗಳಲ್ಲಿ ಜನರ ಮೊಬೈಲ್ ಫೋನ್ ಕಳವಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪೊಲೀಸರು ಕೂಡ ಘಟನೆಯ ವರದಿ ಪಡೆದುಕೊಂಡಿದ್ದಾರೆ. ಸ್ಥಳೀಯರಿಗೆ ಜಾಗೃತೆಯಿಂದ ಇರಲು ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಪೊಲೀಸರು, ಯಾಕೆ ಮೌನವಾಗಿ ಇದ್ದಾರೆ ಎಂಬ ಅಸಮಾಧಾನ, ಸಾರ್ವಜನಿಕರ ರಕ್ಷಣೆಯ ಬಗ್ಗೆ ಚಿಂತಿಸುವುದಿಲ್ಲ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.***************************

Back to top button