ಪ್ರಕೃತಿ ಬೆಳಗಾವಿ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಿಕೊಪ್ಪ ಸಸ್ಯ ಶ್ಯಾಮಲಾ ಕಾರ್ಯಕ್ರಮ…!!

ಪ್ರಕೃತಿ ಬೆಳಗಾವಿ ಸುದ್ದಿ : ಲಕ್ಷ್ಮೇಶ್ವರ-14 ಇಲ್ಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಿಕೊಪ್ಪ ಇಲ್ಲಿ ಸಸ್ಯ ಶ್ಯಾಮಲಾ ಕಾರ್ಯಕ್ರಮ ನೆರವೇರಿತು.
ಈ ಒಂದು ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಲ್ಮೇಶ್ವರ ದೊಡ್ಡಮನಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮುಖ್ಯ ಶಿಕ್ಷಕ ಎಂ ಎಸ್ ಹಿರೇಮಠ ಮಾತನಾಡಿ ಸಸ್ಯಗಳಿಂದ ಮರಗಳಿಂದ ಆಗುವ ಉಪಯೋಗಗಳನ್ನು ತಿಳಿಸಿದರು.ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.
ಮನೆಗೊಂದು ಮರ ಊರಿಗೊಂದು ವನ ಇದರಿಂದ ನಾವೆಲ್ಲರೂ ಸುಭಿಕ್ಷರಾಗಿ ಬಾಳಬಹುದು ಹಾಗೂ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ದೇವಪ್ಪ ಲಮಾಣಿ ಪತ್ರಕರ್ತ ಮಂಜು ರಾಠೋಡ ಸಿದ್ಧು ಯಂಗಾಡಿ ಶಿವರಾಜ್ ಲಮಾಣಿ ರಮೇಶ ದೊಡ್ಡಮನಿ ಅಕ್ಕಮ್ಮ ನೀರಲಗಿ ಷಣ್ಮುಖ ಹುಬ್ಬಳ್ಳಿ ರತ್ನಾ ದೊಡ್ಡಮನಿ ಹಿರಿಯರಾದ ರಾಮಣ್ಣ ಬಾಣದ ಬಸು ಲಮಾಣಿ ನಾಗರಾಜ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು
ಸಹ ಶಿಕ್ಷಕ ಎನ್ ಎಸ್ ಸಜ್ಜನರ ಕಾರ್ಯಕ್ರಮ ನಿರೂಪಿಸಿದರು.********************************

Back to top button