ಅಮೋಘಸಿದ್ಧ ಮಹಾರಾಜರು ಬೇಡಿ ಬಂದ ಭಕ್ತರಿಗೆ ಬೇಡಿದನ್ನೇ ಕೊಡುವ ಕಾಮಧೇನು ಕಲ್ಪವೃಕ್ಷ ಇದ್ದಂತೆ…!!
ದಾನ, ಧರ್ಮ, ಪರೋಪಕಾರ ಮಾಡುವುದರಿಂದ ಈ ಪವಿತ್ರವಾದ ಮನುಷ್ಯ ಜನ್ಮವು ಸಾರ್ಥಕವಾಗುವುದು: ಸದಾಶಿವ ಮುತ್ಯಾ ಮಹಾರಾಜರು…
ಭಂಡಾರವನ್ನು ನಂಬಿದರ ಬಾಳು ಬಂಗಾರವಾಗುವುದು. ಶ್ರೀ ಅಮೋಘಸಿದ್ದರು ತಮ್ಮ ಪವಾಡಗಳ ಮೂಲಕ ಭಕ್ತರ ಪಾಲಿನ ಆಶಾಕಿರಣವಾಗಿದ್ದರೆ…
ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ಪ್ರತಿಯೊಬ್ಬರೂ ಭಕ್ತಿಯಿಂದ ಮುಕ್ತಿ ಸಾಧಿಸಲು ಸಾಧ್ಯವಿದೆ. ದಾನ, ಧರ್ಮ, ಪರೋಪಕಾರ ಮಾಡುವುದರಿಂದ ಈ ಪವಿತ್ರವಾದ ಮನುಷ್ಯ ಜನ್ಮವು ಸಾರ್ಥಕವಾಗುವುದು. ಶ್ರೀ ಅಮೋಘಸಿದ್ಧ ಮಹಾರಾಜರು ಬೇಡಿ ಬಂದ ಭಕ್ತರಿಗೆ ಬೇಡಿದನ್ನೇ ಕೊಡುವ ಕಾಮಧೇನು ಕಲ್ಪವೃಕ್ಷ ಇದ್ದಂತೆ. ಭಂಡಾರವನ್ನು ನಂಬಿದರ ಬಾಳು ಬಂಗಾರವಾಗುವುದು. ಶ್ರೀ ಅಮೋಘಸಿದ್ದರು ತಮ್ಮ ಪವಾಡಗಳ ಮೂಲಕ ಭಕ್ತರ ಪಾಲಿನ ಆಶಾಕಿರಣವಾಗಿದ್ದರೆ.
ಪ್ರತಿಯೊಬ್ಬರೂ ಅಮೋಘಸಿದ್ದರ ಭಕ್ತಿ ಮಾಡಿ ಮುಕ್ತಿ ಪಡಿಬೇಕು. ಜಾತ್ರೆಗಳು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಭಕ್ತಿ, ಬಾಂಧವ್ಯ ಬೆಸೆಯುವ ಕೊಂಡಿಗಳಾಗಿವೆ. ಜಾತ್ರೆಗಳು ನಮ್ಮ ಸಾಂಸ್ಕೃತಿಕ ಪ್ರತೀಕಗಳಾಗಿವೆ ಎಂದು ಬಬಲಾದಿ ಶಾಖಾಮಠ ಹಿಡಕಲ್ಲ ಗ್ರಾಮದ ಪುಣ್ಯಕ್ಷೇತ್ರ ಪೀಠಾಧಿಪತಿ ಸದ್ಗರು ಸದಾಶಿವ ಮುತ್ಯಾ ಆಶೀರ್ವಚನ ನೀಡಿದರು.
ಅವರು ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದ ಶ್ರೀ ಮಾಳಸಿದ್ದ ಒಡೆಯರ ಅವರ ತೋಟದಲ್ಲಿ ಜರುಗಿದ ಶ್ರೀ ಅಮೋಘಸಿದ್ದೇಶ್ವರ ದೇವರ 8ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಸಾಯಂಕಾಲ 7ಗಂಟೆಗೆ ಜರುಗಿದ ಸತ್ಸಂಗ ಧರ್ಮ ಸಭೆಯಲ್ಲಿ ದಿವ್ಯ ಸಾನಿಧ್ಯವಹಿಸಿ ನೆರೆದ ಭಕ್ತ ಜನಸ್ತೋವನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಕವಲಗುಡ್ಡ/ಹಣಮಾಪುರದ ಮಠಗಳ ಪೀಠಾಧಿಪತಿ, ಸಿದ್ದಯೋಗಿ ಅಮರೇಶ್ವರ ಮಹಾರಾಜರು ಪಾವನ ಸಾನಿಧ್ಯವಹಿಸಿದ್ದರು. ವೇದಿಕೆಯ ಮೇಲೆ ಹೆಬ್ಬಾಳಟ್ಟಿ ಸಿದ್ದರಾಮ ಅಜ್ಜ, ಮೆಟಗುಡ್ಡದ ಬನಸಿದ್ಧ ಮಹಾರಾಜರು, ಹತ್ತೂರ ಬನಸಿದ್ದ ಮಹಾರಾಜರು, ಬೋರ್ಯಳ ಪ್ರಕಾಶ ಮಹಾರಾಜರು, ಮಕಣಾಪುರದ ಸೋಮಲಿಂಗ ಮಹಾರಾಜರು, ಮಂದ್ರೂಪದ ಅಮರಸಿದ್ಧ ಮಾಹಾರಾಜರು, ಹಿಡಕಲ್ಲದ ಮಾಳಸಿದ್ಧ ಮಹಾರಾಜರು, ಮರಿದೇವರು ಅಮ್ಮಣ್ಣ ಒಡೆಯರ ಉಪಸ್ಥಿತರಿದ್ದರು.
ತಾಲೂಕು ಕಸಾಪ ಕಾರ್ಯದರ್ಶಿ ಸಾಹಿತಿ ಟಿ.ಎಸ್.ವಂಟಗೂಡಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜನಪದ ಕಲಾವಿದರು ಶಿಕ್ಷಕ ಭೀಮರಾವ್ ಘಂಟಿ ನಿರೂಪಿಸಿದರು. ಪ್ರಾಚಾರ್ಯ ಲಕ್ಷ್ಮಣ ಪಾಟೀ ವಂದಿಸಿದರು. ನಂತರ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರ್ಪಣೆನೆರವೇರಿತು.**********************











