ವಿದ್ಯಾರ್ಥಿಗಳ ಸರ್ವೋತೋಮುಖ ವಿಕಾಸವಾಗಬೇಕಾದರೆ, ಶಿಕ್ಷಕರ, ಪಾಲಕರ ಪಾತ್ರ ಅತ್ಯವಶ್ಯಕವಾಗಿದೆ: ಸಾಹಿತಿ ಟಿ.ಎಸ್.ವಂಟಗೂಡಿ…!!
ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ವಿದ್ಯಾರ್ಥಿಗಳು ತಮ್ಮ ಜ್ಞಾನ ದೀವಿಗೆಯಿಂದ ಜಗತ್ತು ಬೆಳಗುವ ನಂದಾ ದೀಪಗಳಾಗಬೇಕು. ವಿದ್ಯಾರ್ಥಿಗಳ ಸರ್ವೋತೋಮುಖ ವಿಕಾಸವಾಗಬೇಕಾದರೆ, ಶಿಕ್ಷಕರ, ಪಾಲಕರ ಪಾತ್ರ ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳು ಸತತ ಪ್ರಯತ್ನ, ಏಕಾಗ್ರತೆ, ಸಮಯ ಪ್ರಜ್ಞೆ ಅಳವಡಿಸಿಕೊಂಡು ಸಾಧನೆ ಮಾಡಿ ಜ್ಞಾನದ ಜ್ಯೋತಿಗಳಾಗಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಸಾಹಿತಿ ಟಿ.ಎಸ್. ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.
ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಮಾಳಸಿದ್ದೇಶ್ವರ ತೋಟದ ಶಾಲೆಯಲ್ಲಿ ಸನ್. 2024 -25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ಭೂದಾನಿಗಳಾದ ಧರೆಪ್ಪ ಸೈದಾಪುರ ಅಧ್ಯಕ್ಷತೆವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಾಜರಾತಿ ಎಲ್ಲಾ ಶಾಲಾ ಮಕ್ಕಳಿಗೆ ಪಠ್ಯಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುಭಾಷ ವಲ್ಯಾಪುರ, ಮಾದೇವ ಸೈದಾಪುರ, ಪ್ರಧಾನಗುರು ಎಸ್.ಬಿ.ಕ್ಯಾಸ್ತಿ, ಬೀರಪ್ಪ ತಡಸನೂರ, ಗೈಬು ಸೈದಾಪುರ, ಮನೋಹರ ಮಣ್ಣಿಕೇರಿ, ರಮೇಶ ಸೈದಾಪುರ, ಅಣ್ಣಪ್ಪ ಪತ್ತಾರ, ಶೇಖರ ಸೈದಾಪುರ, ಮಹಾದೇವ ಸೈದಾಪುರ, ಕರೇಪ್ಪ ಗಲಗಲಿ, ಕೆಂಚಪ್ಪ ಸೈದಾಪುರ, ಕಾವೇರಿ ಮಠಪತಿ, ಎಂ.ಎಚ್.ಪಾರ್ಥನಳ್ಳಿ, ಗಾಯತ್ರಿ ಎಚ್, ಅಜಿತ ಸೈದಾಪುರ, ಗುರುರಾಜ ಕುಲಕರ್ಣಿ, ಮಾರುತಿ ಜಂಬಗಿ, ವಸಂತ ಜಂಬಗಿ, ಎಸ್.ಸಿ.ಠಕ್ಕಣ್ಣವರ ಇತರರು ಉಪಸ್ಥಿತರಿದ್ದರು. ಪ್ರಧಾನಗುರು ಎಸ್.ಬಿ.ಕಾಸ್ತಿ ಪ್ರಾಸ್ತಾಯಕವಾಗಿ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕ ಎಸ್.ಸಿ.ಠಕ್ಕಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.*****************************






