ಪತ್ರಕರ್ತರಿಗೆ ಧಮ್ಮಿ ಹಾಕಿದ ಸಂತೋಷ್ ಚುರಮೂಲೆ ವಿರುದ್ದ ಕ್ರಮಕ್ಕೆ ಆಗ್ರಹಸಿ ಸರಕಾರಕ್ಕೆ ಮನವಿ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸೇರಿಕೊಂಡು ಪತ್ರಕರ್ತರಿಗೆ ಧಮ್ಮಿ ಹಾಕಿದ ಸಂತೋಷ್ ಚುರಮೂಲೆ ವಿರುದ್ದ ಕ್ರಮಕ್ಕೆ ಆಗ್ರಹಸಿ ಸರಕಾರಕ್ಕೆ ರಾಮದುರ್ಗ ತಹಸೀಲ್ದಾರ್ ಮೂಲಕ ಮನವಿ ನೀಡಿದರು.
ಈ ಸಂಧರ್ಭದಲ್ಲಿ ಜನಪರ ಸಂಘಟನೆಯ ಅಧ್ಯಕ್ಷ ಸುಭಾಸ್ ಗೋಡಖೆ ಮತ್ತು ಮಲ್ಲಿಕಾರ್ಜುನ ದುಪದ ಮಾತನಾಡಿದರು.ಅಥಣಿ ತಾಲೂಕಿನ ಬೆವನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಉದ್ಭವಿಸಿದ ಈ ಘಟನೆ ಸಕಲರನ್ನು ನಡುಗಿಸಿದೆ. ಕಾಗವಾಡ ಶಾಸಕ ರಾಜು ಕಾಗೆ ಅವರ ಸಮ್ಮುಖದಲ್ಲಿ, ಸಂತೋಷ ಚುರಮೂಲೆ ಎಂಬುವವರು ಮಾಧ್ಯಮದ ಪ್ರತಿನಿಧಿಗಳಿಗೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜು ಕಾಗೆ, ಮಾಧ್ಯಮದವರು ತಮ್ಮ ಬಗ್ಗೆ ಬೇರೆ ದೃಷ್ಟಿಯಿಂದ ವರದಿ ಮಾಡಿದರೆ, ಅವರ ಮನೆ ಹೊಕ್ಕು ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿರುವ ಸಂತೋಷ ಚುರಮೂಲೆ, ಮಾಧ್ಯಮದ ಪ್ರತಿನಿಧಿಗಳಿಗೆ ದಮ್ಮಿ ಹಾಕಿದ್ದಾರೆ.
ಆದ ಕಾರಣ ಪತ್ರಕರ್ತಗೆ ಭದ್ರತೆ ಹಾಗೂ ಸಂತೋಷ ಚುರಮೂಲೆ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಅಂತಹವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಮದುರ್ಗ ಪ್ರೆಸ್ ಕ್ಲಬ್ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವೃತ್ತಿ ನಿರತ ಪತ್ರಕರ್ತರರು ತಾಲೂಕು ಘಟಕದಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಹ ಸಚಿವ ಜಿ ಪರಮೇಶ್ವರ ಅವರಿಗೆ ಮನವಿಯಲ್ಲಿ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ರಾಮದುರ್ಗ ಪ್ರೆಸ್ ಕ್ಲಬ್ ಅಧ್ಯಕ್ಷ, ಮಲ್ಲಿಕಾರ್ಜುನ ದುಪದ ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕಾ ಅಧ್ಯಕ್ಷ, ಎಂ ಕೆ ಯಾದವಾಡ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.*****************************






