ಪ್ರಕೃತಿ ಬೆಳಗಾವಿ

ಪ್ರೊ. ಸಿದ್ದು ಸಾವಳಸಂಗ ಅವರಿಗೆ ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರದಾನ…!!

ಪ್ರಕೃತಿ ಬೆಳಗಾವಿ ಸುದ್ದಿ : ಚೇತನ ಫೌಂಡೇಶನ್, ಧಾರವಾಡ ಇವರ ವತಿಯಿಂದ ಮೇ ೧೯ ರಂದು ರವಿವಾರ ನಡೆದ “ವಚನ ವೈಭವ” ಸರಳ ಹಾಗೂ ಸುಂದರ ಕಾರ್ಯಕ್ರಮದಲ್ಲಿ ವಿಜಯಪುರದ ಪ್ರೊ. ಸಿದ್ದು ಸಾವಳಸಂಗ ಇವರಿಗೆ ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಮಾಡಿದ ಸಾಧನೆಗಾಗಿ “ರಾಷ್ಟ್ರೀಯ ಬಸವ ಪ್ರಶಸ್ತಿ” ಪ್ರದಾನ ಮಾಡಲಾಯಿತು.

ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಸಿದ್ದು ಸಾವಳಸಂಗ ( ಕಾವ್ಯನಾಮ – ಚಿರಂಜೀವಿ ) ಅವರು ವೃತ್ತಿಯಿಂದ ಅಧ್ಯಾಪಕರಾಗಿದ್ದು ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದಾರೆ. ೨೮ ವರ್ಷಗಳ ಉಪನ್ಯಾಸಕ ಅನುಭವವನ್ನು ಹೊಂದಿದ ಇವರು, ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕವನ, ಹನಿಗವನ, ಹೈಕು, ತನಗ, ಟಂಕಾ, ಮಕ್ಕಳ ಕವಿತೆ, ಕತೆ, ಮಕ್ಕಳ ಕತೆ, ಆಧುನಿಕ ವಚನಗಳು, ವಿಮರ್ಶಾತ್ಮಕ ಬರಹಗಳು ಹಾಗೂ ಪುಸ್ತಕ ಪರಿಚಯ, ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಇವರು ಬರವಣಿಗೆ ಮಾಡುತ್ತಿದ್ದಾರೆ.

ಸದರಿ ಉಪನ್ಯಾಸಕರು ದಿನವೂ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ೨೦೨೩ ರಲ್ಲಿ ಇವರು “ಹೃದಯ ಹೂವಿನ ಹಂದರ” ಹನಿಗವನ ಸಂಕಲನ ಹಾಗೂ “ವಚನ ಸಂಜೀವಿನಿ” ಆಧುನಿಕ ವಚನಗಳ ಸಂಕಲನಗಳು ಎಂಬ ಎರಡು ಕೃತಿಗಳನ್ನು ಹೊರ ತಂದಿದ್ದಾರೆ. ಅವೆರಡು ಕೃತಿಗಳು ಸಾಕಷ್ಟು ಓದುಗರ ಮೆಚ್ಚುಗೆಯನ್ನು ಗಳಿಸಿವೆ. ಸದ್ಯ “ಗೋಧೂಳಿ ಗಂಧ” ಎಂಬ ಕವನ ಸಂಕಲನ ಮುದ್ರಣದ ಹಂತದಲ್ಲಿದೆ.

ಇವರ ಸಾಧನೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ೨೦೨೪ ರಲ್ಲಿ ಇವರಿಗೆ
(೧) ರಾಷ್ಟ್ರಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ
(೨) ಪದ್ಮಭೂಷಣ ಪಂ. ಪುಟ್ಟರಾಜ ಕವಿ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ
(೩) ಕನ್ನಡದ ವರನಟ ಡಾ. ರಾಜಕುಮಾರ ಇವರ ಹೆಸರಿನಿಂದ ಕೊಡುವ ” ರಾಜರತ್ನ” ಪ್ರಶಸ್ತಿ
(೪) ರಾಷ್ಟ್ರೀಯ ಬಸವ ಪ್ರಶಸ್ತಿ
(೫) ಸುವರ್ಣ ಕರ್ನಾಟಕ ಕಣ್ಮಣಿ ಪ್ರಶಸ್ತಿ
(೬) ಗುರು ದ್ರೋಣಾಚಾರ್ಯ ಪ್ರಶಸ್ತಿ
(೭) ಡಾ. ಬಿ. ಆರ್. ಅಂಬೇಡ್ಕರ್ ಸೇವಾ ಸಮ್ಮಾನ ಪ್ರಶಸ್ತಿ
(೮) ರಾಷ್ಟ್ರ ರತ್ನ ಪುರಸ್ಕಾರ
(೯) ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿ
(೧೦) ಭಾರತ ಸೇವಾ ಪುರಸ್ಕಾರ
ಹೀಗೆ ಒಟ್ಟು ೧೦ ಪ್ರಶಸ್ತಿಗಳು ಲಭಿಸಿವೆ.

ಪ್ರೊ. ಸಿದ್ದು ಸಾವಳಸಂಗ ಅವರು ಶಿಕ್ಷಣ ಹಾಗೂ ಸಾಹಿತ್ಯದಲ್ಲಿ ಇನ್ನೂ ಉನ್ನತ ಸಾಧನೆಯನ್ನು ಮಾಡಲೆಂದು ಅವರ ಸ್ನೇಹಿತರು ಮತ್ತು ಹಿತೈಷಿಗಳು ಹಾರೈಸಿದ್ದಾರೆ.******************************

Back to top button