ಪ್ರಕೃತಿ ಬೆಳಗಾವಿ

ಹೀರೆಬಾಗೇವಾಡಿಯಲ್ಲಿ ಜಗದೀಶ್ ಶೆಟ್ಟರ್ ಪವರ್ ಶೋ…!!

ಬೃಹತ್ ರೋಡ್ ಶೋ ಮೂಲಕ ಮತಯಾಚನೆ…

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಇಂದು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಹೀರೆಬಾಗೇವಾಡಿಯಲ್ಲಿ ಬೃಹತ್ ರೋಡ್ ಶೋ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ರೋಡ್ ಶೋ ನಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಈ ರೋಡ್ ಶೋನಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಜಗದೀಶ್ ಸಾಥ್ ನೀಡಿದ್ದಾರೆ. ಗ್ರಾಮಸ್ಥರ ಬೆಂಬಲ ಕಂಡು ಈ ಬಾರಿ ಮತ್ತೊಮ್ಮೆ ಕಮಲ ಅರಳುವುದು ಶತಸಿದ್ಧ ಎಂದು ಜಗದೀಶ್ ಶೆಟ್ಟರ್ ಅವರು ವಿಶ್ವಾಸ ವ್ಯಕ್ತ ಪಡಿಸಿದರು.‌ ಈ ವೇಳೆ ಜನ ಮೋದಿ ಮೋದಿ ಎಂದು ಜಯ ಘೋಷಣೆ ಕೂಗುವ ಮೂಲಕ ಬೆಂಬಲ ವ್ಯಕ್ತ ಪಡಿಸಿದರು

ಈ ಸಂದರ್ಭದಲ್ಲಿ ಪ್ರಮುಖರಾದ ಯಲ್ಲಪ್ಪ ಧರೆಣ್ಣವರ, ಶಂಕರಗೌಡ ಪಾಟೀಲ, ಬಸಲಿಂಗ ಮಠಪತಿ, ಸಿದ್ದು ಹುಕ್ಕೇರಿ, ಚೇತನ ಅಗಡಿ, ವಕೀಲರಾದ ರವಿ, ಜೆಡಿಎಸ್ ಮುಖಂಡರಾದ ರಮೇಶಗೌಡ ಪಾಟೀಲ್, ಕಲಾವತಿ ಧರೆಣ್ಣವರ, ಶಾಂತಕುಮಾರ ವಿ.ವಿ ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.******************************

Back to top button