ಪ್ರಕೃತಿ ಬೆಳಗಾವಿ

ಮುಗಳಖೋಡ ಶ್ರೀಮಠಕ್ಕೆ ಭೇಟಿ ನೀಡಿದ ರಾಹುಲ ಜಾರಕಿಹೊಳಿ…!!

ಡಾ. ಮುರುಘರಾಜೇಂದ್ರ ಮಹಾ ಶಿವಯೋಗಿಗಳಿಂದ ಆಶೀರ್ವಾದ ಪಡೆದುಕೊಂಡರು…

ಪ್ರಕೃತಿ ಬೆಳಗಾವಿ ಸುದ್ದಿ : ಮುಗಳಖೋಡ : ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಮಠದಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಕರಕಮಲ ಸಂಜಾತರು ಶ್ರೀ ಸಿದ್ದಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಶತಮಾನೋತ್ಸವ ಸುಸಂದರ್ಭದಲ್ಲಿ ಗುರುವಾರ ದಿ: 18ರಂದು ಜರುಗಿದ ಜಗಜಟ್ಟಿ ಕಾಳಗ ಜಂಗಿ ನಿಕಾಲಿ ಕುಸ್ತಿ ಕಾದಾಟವು ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಶಿವಯೋಗಿಗಳು ದಿವ್ಯ ಸಾನಿಧ್ಯದಲ್ಲಿ ಜರುಗಿತು. ಕಾಂಗ್ರೇಸ್ ಪಕ್ಷದ ಯುವ ನಾಯಕ ರಾಹುಲ ಜಾರಕಿಹೊಳಿ ಅವರನ್ನು ಶಾಲು ಹೊಡಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರಮೇಶ ಯಡವಣ್ಣವರ, ಗೋಪಾಲ ಯಡವಣ್ಣವರ, ಬಸವರಾಜ ಜೋಪಾಟಿ, ಅರ್ಜುನ ನಾಯಿಕವಾಡಿ, ಶ್ರೀಶೈಲ ಅಂಗಡಿ, ಪರಪ್ಪಗೌಡ ಖೇತಗೌಡ, ಶ್ರೀಶೈಲ ಗೋಕಾಕ, ಬಸವರಾಜ ಸಾಯನ್ನವರ, ಮುಪ್ಪಯ್ಯ ಹಿರೇಮಠ, ಯಲ್ಲಾಲಿಂಗ ಖೇತಗೌಡರ, ಆನಂದ ಯರಡತ್ತಿ, ಗಂಗಪ್ಪ ಗೋಕಾಕ, ಹನುಮಂತ ಕುಲಿಗೋಡ, ವಿಜಯ ಅಸೋದೆ, ಲಕ್ಷ್ಮಣ ಗೋಕಾಕ, ಪ್ರಕಾಶ ಹುದ್ದಾರ, ಶ್ರೀಶೈಲ ಕಡಕೋಳ, ಪಂಡಿತ ಆಸೋದೆ, ಮುತ್ತಪ್ಪ ಹುಕ್ಕೇರಿ, ಪರಶುರಾಮ ಹಳ್ಳೂರ, ಅಡಿವೆಪ್ಪ ತೋಟಗಿ, ದಾದು ತಹಶೀಲ್ದಾರ್, ಮಲ್ಲಪ್ಪ ದಾಶ್ಯಾಳ, ಪರಶುರಾಮ ಯರಡತ್ತಿ, ರಾಜು ಕದಂ, ಇತರರು ಇದ್ದರು.****************************************

Back to top button