ಪ್ರಕೃತಿ ಬೆಳಗಾವಿ
*ಹಳೆಯ ದ್ವೇಷಕ್ಕೆ ಕಿರಾಣಿ ಅಂಗಡಿಗೆ ಬೆಂಕಿ: ಆರೋಪಿ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಿರಾಣಿ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಮಾರು ₹50 ಸಾವಿರ ಮೌಲ್ಯದ ಸಾಮಗ್ರಿಗಳನ್ನು ಸುಟ್ಟು ಹಾನಿ ಮಾಡಿದ ಆರೋಪಿಯನ್ನು ಖಡೇಬಜಾರ ಪೊಲೀಸರು ಬಂಧಿಸಿದ್ದಾರೆ.
ಶಾಸ್ತ್ರೀ ನಗರದ ಅಟ್ಲಿ ಚಾಳದ ನೀತಾ ಸತೀಶ ಪಟೇಲ್ ಅವರಿಗೆ ಸೇರಿದ ಅಂಗಡಿಗೆ ನ.15ರ ಮಧ್ಯರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪದ ಮೇಲೆ ವಿನಾಯಕ ಚಂದ್ರಕಾಂತ ವೆರ್ನೇಕರ (40) ಎಂಬಾತನನ್ನು ಬಂಧಿಸಲಾಗಿದೆ.
ಈ ಕುರಿತು ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.*******************************






