ಪ್ರಕೃತಿ ಬೆಳಗಾವಿ

ಬಿಜೆಪಿ-ಜೆಡಿಎಸ್ ಮೈತ್ರಿ 28 ಕ್ಷೇತ್ರದಲ್ಲಿ ಗೆಲ್ಲುತ್ತೆ: ಜಗದೀಶ್ ಶೆಟ್ಟರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬೈಲಹೊಂಗಲ : ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇವೆ.‌ 25 ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ 3 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದೆ. ರಾಜ್ಯದಲ್ಲಿ ಇವತ್ತಿನ ವಾತಾವರಣ ನೋಡಿದರೆ ಬಿಜೆಪಿ ಜೆಡಿಎಸ್ ಮೈತ್ರಿ 28 ಕ್ಷೇತ್ರದಲ್ಲಿ ಗೆಲ್ಲುತ್ತೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.‌

ಮಂಗಳವಾರ ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಲಹೊಂಗಲ ಮತಕ್ಷೇತ್ರದ ಉಡಕೇರಿ, ಬೂದಿಹಾಳ, ಮೂಗಬಸವ, ಏಣಗಿ, ಸುತಗಟ್ಟಿ ಹಾಗೂ ಹಿಟ್ಟಣಗಿ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿದರು.‌

ಈ ವೇಳೆ ಮಾತನಾಡಿದ ಅವರು, ಸದೃಢ ರಾಷ್ಟ್ರ ನಿರ್ಮಾಣ ಹಾಗೂ ವಿಕಸಿತ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಡ ಯೋಜನೆಗಳ ಕುರಿತು ಹೇಳಿದರು. ನಿಮ್ಮ ಸೇವಕನಾಗಿ ಕೆಲಸ ಮಾಡಲು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಜಗದೀಶ್ ಶೆಟ್ಟರ್ ಅವರು ಮನವಿ ಮಾಡಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಅವರು, ಕಾಂಗ್ರೆಸ್‌ ನವರು ಸಣ್ಣ ಹುಡುಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ.‌ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೂಡಾ ನಾವು ಅನುಭವಿ ವ್ಯಕ್ತಿಗೆ ಮತ ನೀಡುತ್ತೇವೆ ಆದರೆ ಇದು ಲೋಕಸಭಾ ಚುನಾವಣೆ ಆಗಿದೆ.‌ ಹಾಗಾಗಿ ಜಗದೀಶ್ ಶೆಟ್ಟರ್ ಅವರಿಗೆ ಮತ ನೀಡಿ. ದೇಶದಲ್ಲೇ ಕಾಂಗ್ರೆಸ್‌ ನಿರ್ಮೂಲನೆ ಆಗಿದೆ. ಕಳೆದ ಚುನಾವಣೆಯಲ್ಲಿ ಕೆವಲ 40 ಸೀಟ್ ಗೆದ್ದಿದೇವೆ. ಜಗದೀಶ್ ಶೆಟ್ಟರ್ ಅವರು ಸಿಎಂ ಆಗಿದ್ದವರು, ಅವರು ಕೇಂದ್ರ ಸಚಿವರು ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಗದೀಶ್ ಮೆಟಗುಡ್, ಡಾ. ವಿ. ಐ.‌ಪಾಟೀಲ, ಮಂಡಲ ಅಧ್ಯಕ್ಷರಾದ ಗುರುಪಾದಪ್ಪ ಕಳ್ಳಿ, ಜೆಡಿಎಸ್ ಯುವ ಘಟಕದ ಸುನೀಲ ವರ್ಣೇಕರ, ಪ್ರಮುಖರಾದ ಗುರು ಮೆಟಗುಡ್, ಎಫ್ ಎಸ್ ಸಿದ್ದನಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.*********************************

Back to top button