ಪ್ರಕೃತಿ ಬೆಳಗಾವಿ

ಕೆಲವು ಬಿಜೆಪಿ ನಾಯಕರು ಪ.ಜಾತಿ/ಪ.ಪಂಗಡ ಸಮುದಾಯಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಇತ್ತೀಚಿಗೆ ಬಿಜೆಪಿಯ ಕೆಲವು ನಾಯಕರು ಪ.ಜಾತಿ/ಪ.ಪಂಗಡ ಸಮುದಾಯದ ಜನರಿಗೆ ಅವಮಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ ಅನಂತಕುಮಾರ ಹೆಗಡೆ ರವರು ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎನ್ನುವ ಅವಹೇಳನಕಾರಿ ಮಾತುಗಳು ಹಾಗೂ ಪ್ರಹ್ಲಾದ ಜೋಶಿ ರವರು ಹುಬ್ಬಳ್ಳಿಯ ಬಿಜೆಪಿ ಕಚೇರಿಯ ಕಾರ್ಯಕ್ರಮ ಒಂದರಲ್ಲಿ ಬಿಜೆಪಿ ಕಚೇರಿಯಲ್ಲಿ ಇದ್ದ ಮಹರ್ಷಿ ವಾಲ್ಮೀಕಿ ಮತ್ತು ಬಾಬಾ ಸಾಹೇಬ ಅಂಬೇಡ್ಕರ್ ರವರ ಫೋಟೋವನ್ನು ತಗಿಸಿ ಹಿಂದುಳಿದ ವರ್ಗಗಳನ್ನು ಅವಮಾನ ಮಾಡಿದ್ದಾರೆ.

ಅದಲ್ಲದೆ ವಿಶ್ವ ಗುರು ಬಸವಣ್ಣನವರ ಫೋಟೋವನ್ನು ಇಡದೆ ಬರಿ ಬಿಜೆಪಿ ಸಂಸ್ಥಾಪಕರು ಆರ್ ಎಸ್ ಎಸ್ ನಾಯಕರ ಭಾವಚಿತ್ರ ಇಟ್ಟು ಮಹರ್ಷಿ ವಾಲ್ಮೀಕಿ ಅಂಬೇಡ್ಕರ್ ವಿಶ್ವ ಗುರು ಬಸವಣ್ಣ ರವರನ್ನ ವಿರೋಧಿಸುವ ಕೆಲ್ಸ ಮಾಡುತ್ತಿದ್ದು. ಬಿಜೆಪಿಗೆ ಬಿಜೆಪಿಯ ಸಂಸ್ಥಾಪಕರು ಆರ್ ಎಸ್ ಎಸ್ ನಾಯಕರ ಅವಶ್ಯಕತೆ ಮಾತ್ರ ಇದೆ ಎಂದು ಅವರ ಈ ಕೃತ್ಯದಿಂದ ತಿಳಿಯುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಎಲ್ಲ ಸಮುದಾಯದ ಜನರ ಒಮ್ಮತ ಸಹಕಾರ ಬೆಂಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಆದರೆ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರದ ಕೆಲವು ನಾಯಕರ ನಡೆ ಮತ್ತು ಹೇಳಿಕೆ ಅವರ ನೀಚ ಕೃತ್ಯ ಹಿಂದುಳಿದ ವರ್ಗಗಳನ್ನು ಅವಮಾನಿಸುವ ಪ್ರಯತ್ನ ನಡೆದಿದೆ.

ಬಿಜೆಪಿಯ ಮುಖ್ಯ ನಾಯಕರು ಹಾಗೂ ಹಿಂದುಳಿದ ಬಿಜೆಪಿ ನಾಯಕರು ಈ ವಿಷಯವಾಗಿ ಗಮನದಲ್ಲಿ ಇಟ್ಟುಕೊಂಡು ಅನಂತಕುಮಾರ ಹೆಗಡೆ ಹಾಗೂ ಪ್ರಹ್ಲಾದ ಜೋಶಿ ಇಂತಹ ಸಂವಿಧಾನ ವಿರೋಧಿ ನಾಯಕರನ್ನು ಬಿಜೆಪಿ ಇಂದ ಕಿತ್ತೊಗೆಯುವ ನಿರ್ಧಾರ ಕೈಗೊಳ್ಳಬೇಕಿದೆ ಸಂವಿಧಾನ ವಿರೋಧಿ ದೋರಣೆ ಯಾರೆ ಮಾಡಲಿ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಎಲ್ಲಾ ಸಮುದಾಯಗಳ ಮುಖಂಡರು ನಾಯಕರು ಹಾಗೂ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ರಾಜ್ಯಾಧ್ಯಕ್ಷ ಮಹೇಶ ಎಸ್ ಶಿಗೀಹಳ್ಳಿ ತಿಳಿಸಿದ್ದಾರೆ.**************************************

Back to top button