ಸಂಜಯ ಪಾಟೀಲ ನೀಚ ಮಾತುಗಳನ್ನು ನಿಲ್ಲಿಸಲಿ ಇಲ್ಲವಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಮಹೇಶ ಶಿಗೀಹಳ್ಳಿ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಹೆಸರಾಂತ ಹೆಮ್ಮೆಯ ಸಚಿವರು ಅಭಿವೃದ್ದಿಯ ಹರಿಕಾರರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ ರವರು ತಮ್ಮ ಅಭಿವೃದ್ದಿಯ ಕಾರ್ಯಗಳಿಂದ ಜನಮನ್ನಣೆ ಪಡೆದಿದ್ದಾರೆ ಇದನ್ನು ಸಹಿಸದ ಸಂಜಯ್ ಪಾಟೀಲ್ ರವರು ತಮ್ಮ ಭಾಷಣಗಳಲ್ಲಿ ಅವಲಹೇಳನಕಾರಿ ಹೇಳಿಕೆ ನೀಡುತ್ತಾ ಇಡಿ ಹೆಣ್ಣು ಕುಲಕ್ಕೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ.
ಇದೆ ರೀತಿ ಮುಂದುವರೆದರೆ ಮಹಿಳಾ ಸಂಘಗಳು ಹಾಗೂ ನಮ್ಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ಸಂಘಟನೆಗಳು ಸಂಜಯ್ ಪಾಟೀಲ್ ರವರ ವಿರುದ್ಧ ಅಂತಿಮ ನಿರ್ಧಾರ ಕೈಗೊಂಡು ಒಳ್ಳೆಯ ಪಾಠ ಕಲಿಸಬೇಕಾಗುತ್ತದೆ ಎಚ್ಚರಿಕೆ.
ಸಂಜಯ ಪಾಟೀಲ ರವರು ತಮಗೆ ಶಕ್ತಿ ಇದ್ದರೆ ಜನರ ಪ್ರೀತಿ ವಿಶ್ವಾಸ ನಂಬಿಕೆ ಗಳಿಸುವಲ್ಲಿ ಪ್ರಯತ್ನ ಮಾಡಲಿ ಅದನ್ನು ಬಿಟ್ಟು ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ಸರಿ ಇಲ್ಲ ಎಂದು ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆಯ ರಾಜ್ಯದ್ಯಕ್ಷ ಮಹೇಶ ಶಿಗೀಹಳ್ಳಿ ಪ್ರಕೃತಿ ಸುದ್ದಿಯ ಪ್ರಕಟಣೆ ಯಲ್ಲಿ ಎಚ್ಚರಿಕೆ ನೀಡಿದ್ದಾರೆ.**************************************






