ಪ್ರಕೃತಿ ಬೆಳಗಾವಿ

*ಶ್ರೀ ಮಲ್ಲಿಕಾರ್ಜುನ ಕುಂಬಾರ ಅವರಿಗೆ ಪಿ.ಎಚ.ಡಿ ಪದವಿ ಪ್ರಧಾನ:*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿಯ ಪಂತ ನಗರ ನಿವಾಸಿ ಮತ್ತು ಶ್ರೀಮತಿ ಸೋಮವ್ವ ಚನ್ನಬಸಪ್ಪ ಅಂಗಡಿ ಪ್ರಥಮ ದರ್ಜೆ ಕಾಲೇಜು, ಕೆ ಕೆ ಕೊಪ್ಪ ಇಲ್ಲಿಯ ಗ್ರಂಥಪಾಲಕರಾದ ಶ್ರೀ ಮಲ್ಲಿಕಾರ್ಜುನ ಕುಂಬಾರ ಅವರಿಗೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ಪ್ರಧಾನ ಮಾಡಿದೆ.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಅವರು ಮಂಡಿಸಿದ “ಯೂಸ್ ಆಫ್ ಕಾಂಪಿಟೇಟಿವ್ ಎಕ್ಸಾಮಿನೇಷನ ಫೆಸಿಲಿಟಿ ಅಂಡ್ ರಿಸೋರ್ಸ್ ಬೈ ಪಬ್ಲಿಕ ಲೈಬ್ರರಿ ಯೂಸರ್ ಇನ್ ಬೆಳಗಾವಿ ಡಿಸ್ಟ್ರಿಕ್ಟ್ – ಏ ಸ್ಟಡಿ” ಈ ಮಹಾಪ್ರಬಂಧಕ್ಕೆ ಪಿಎಚಡಿ ಪದವಿ ನೀಡಿಗೌರವಿಸಿದೆ

ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,ಬೆಳಗಾವಿಯ ನಿವೃತ್ತ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೊ ವಿನಾಯಕ ಬಂಕಾಪುರ ಅವರ ಮಾರ್ಗದರ್ಶನದಲ್ಲಿ ಸದರಿ ಮಹಾಪ್ರಬಂಧ ಮಂಡಿಸಿದ್ದಾರೆ.

ಇವರ ಈ ಸಾಧನೆಗೆ ಮತ್ತು ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯಗಳ ಬಗ್ಗೆ ಮಹಾಪ್ರಬಂಧ ಮಂಡಿಸಿ, ಡಾಕ್ಟರೇಟ್ ಪದವಿ ಪಡೆದ ಡಾ.ಮಲ್ಲಿಕಾರ್ಜುನ ಕುಂಬಾರ ಅವರಿಗೆ ನಗರದ ಕೇಂದ್ರ ಗ್ರಂಥಾಲಯ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿಯ ಉಪ ನಿರ್ದೇಶಕರಾದ ಶ್ರೀ ರಾಮಯ್ಯ ಅವರು,ಮತ್ತು ಪ್ರಕಾಶ ಇಚಲಕರಂಜೀ,ಅಧೀಕ್ಷಕರಾದ ಎ ಎ ಕಾಂಬಳೆ, ಹಿರಿಯ ಶಿಕ್ಷಕಿಯರಾದ ಶ್ರೀಮತಿ ಗಂಗಾ ಚಕ್ರಸಾಲಿ,ಮತ್ತಿತರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.***************************

Leave a Reply

Your email address will not be published. Required fields are marked *

Back to top button