ಪ್ರಕೃತಿ ಬೆಳಗಾವಿ

*ಚಿಕ್ಕೋಡಿ ಹೊರವಲಯದ ಹಾಲಟ್ಟಿಯಲ್ಲಿ ಸರಣಿ ಕಳ್ಳತನ: 40 ಗ್ರಾಂ ಬಂಗಾರ ಸೇರಿ ಬೆಲೆಬಾಳುವ ವಸ್ತುಗಳ ಕಳವು*

ಪ್ರಕೃತಿ ಬೆಳಗಾವಿ ಸುದ್ದಿ : ಚಿಕ್ಕೋಡಿ ಪಟ್ಟಣದ ಹೊರವಲಯದ ಹಾಲಟ್ಟಿಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಸೋಮವಾರ ನಸುಕಿನ ಜಾವ ಮೂರು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಕಾಕಸಾಹೇಬ ಬಸಪ್ಪ ಚನ್ನವರ, ಮಾರುತಿ ಬಸಪ್ಪ ಚನ್ನವರ ಹಾಗೂ ಬಸವರಾಜ ನೇಸರಗಿ ಎಂಬುವರಿಗೆ ಸೇರಿದ ಮನೆಗಳಲ್ಲಿ ಕಳ್ಳತನವಾಗಿದೆ. ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು, ನಿನ್ನೆ ರಾತ್ರಿ ಹೊಂಚು ಹಾಕಿ ಮನೆಗಳಿಗೆ ನುಗ್ಗಿ 40 ಗ್ರಾಂ ಬಂಗಾರದ ಒಡವೆಗಳು ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಮಧ್ಯಾಹ್ನ ಮನೆ ಮಾಲೀಕರು ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.******************************

Leave a Reply

Your email address will not be published. Required fields are marked *

Back to top button