ಪ್ರಕೃತಿ ಬೆಳಗಾವಿ

*ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2026 ಸಮಾರೋಪ ಸಮಾರಂಭ*

*ಪುಸ್ತಕಗಳು ಉತ್ತಮ ಸಂಗಾತಿಗಳು – ರಾಮಯ್ಯ.*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಪ್ರಯತ್ನಕ್ಕೆ ಫಲವಿದೆ ಎನ್ನುವಂತೆ,ನಿರಂತರ ಓದಿನಿಂದ ಯಶಸ್ಸು ಸಾಧ್ಯ, ಆದ್ದರಿಂದ ಪುಸ್ತಕಗಳನ್ನು ಉತ್ತಮ ಸಂಗಾತಿ ಗಳನ್ನಾಗಿ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಗರದ ಕೇಂದ್ರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ, ಬೆಳಗಾವಿ ಉಪನಿರ್ದೇಶಕರಾದ ಶ್ರೀ ರಾಮಯ್ಯ ಅವರು ಹೇಳಿದರು. ಅವರು ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಆಚರಿಸಲಾದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ನಾಟಕಕಾರರು,ರಂಗಕರ್ಮಿ,ಸಾಹಿತಿ,ಉಪನ್ಯಾಸಕರು ಮತ್ತು 2026 ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಡಿ ಎಸ್ ಚೌಗಲೆ ಅವರು ಗ್ರಂಥಾಲಯ ಮತ್ತು ಪುಸ್ತಕಗಳ ಮಹತ್ವದ ಬಗ್ಗೆ ಮಾತನಾಡಿ, ತಮ್ಮದೇ ಶೈಲಿಯಲ್ಲಿ ತಮ್ಮ ನಾಟಕದ ತುಣುಕನ್ನು ಸಹ ಪ್ರಸ್ತುತ ಪಡಿಸಿದರು. ಇದೇ ಸಂಧರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರನ್ನು ಇಲಾಖೆ ಮತ್ತು ನಗರ/ ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಸನ್ಮಾನಿಸಲಾಯಿತು.

ಇನ್ನೋರ್ವ ಅತಿಗಳಾದ ಶ್ರೀ ಭರತ ಅಲಸಂದಿ,ಗ್ರಂಥಪಾಲಕರೂ ಮತ್ತು ಉಪ ಪ್ರಾಚಾರ್ಯರು,ಮತ್ತು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ,ಬೆಳಗಾವಿ ಜಿಲ್ಲಾ ಶಾಖೆಯ ಅಧ್ಯಕ್ಷರು, ಗ್ರಂಥಾಲಯಗಳ ಪ್ರಸ್ತುತತೆ ಮತ್ತು ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿ ಸಾರ್ವಜನಿಕ ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.

ಮತ್ತೋರ್ವ ಅತಿಥಿಗಳಾದ ಡಾ.ನಿರ್ಮಲಾ ಬಟ್ಟಲ, ಪ್ರಾಚಾರ್ಯರು ಮತ್ತು ಸಾಹಿತಿಗಳು,ಮಾತನಾಡಿ ತಮ್ಮ, ಗ್ರಂಥಾಲಯಗಳ ಮತ್ತು ಪುಸ್ತಕಗಳ ಒಡನಾಟದ ಬಗ್ಗೆ ಮಾತನಾಡಿ, ನಮ್ಮ ಜೀವನವನ್ನು ಪುಸ್ತಕಗಳು ಬದಲಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಸಪ್ತಾಹ ಅಂಗವಾಗಿ ನಗರದ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ.ಮತ್ತು ಗ್ರಂಥಾಲಯ ಓದುಗರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ, ಓದುಗರಿಗೆ ಅತಿಥಿಗಳು ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಅದೇ ರೀತಿ ನಗರ ಜಿಲ್ಲಾ ಕೇಂದ್ರ ಗ್ರಂಥಾಲಯದ ಉತ್ತಮ ಓದುಗರಿಗೆ ಪ್ರಶಸ್ತಿ ನೀಡಲಾಯಿತು. ಜೊತೆಗೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸರಸ್ವತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಏ ಏ ಕಾಂಬಳೆ ಸ್ವಾಗತಿಸಿದರು. ಸಿದ್ದು ಮೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಂಬೇಕರ, ಪ್ರಕಾಶ ಇಚಲಕರಂಜೀ,ವಸಂತ್ ಚಿತ್ರಗಾರ ನಿರೂಪಿಸಿದರು. ಸುನಿಲಕುಮಾರ ವಂದಿಸಿದರು. ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿಯ ಎಲ್ಲ ಸಿಬ್ಬಂದಿ, ಸಾರ್ವಜನಿಕ ಓದುಗರು,ವಿದ್ಯಾರ್ಥಿಗಳು,ಶಿಕ್ಷಕರು, ಮಾಧ್ಯಮ ಮಿತ್ರರು ಈ ಸಂಧರ್ಭದಲ್ಲಿ ಹಾಜರಿದ್ದರು.***************************

Leave a Reply

Your email address will not be published. Required fields are marked *

Back to top button