*ಬೆಳಗಾವಿ CCB ಪೊಲೀಸರ ಭರ್ಜರಿ ದಾಳಿ – ₹6.89 ಲಕ್ಷ ಮೌಲ್ಯದ ಅಕ್ರಮ ಪೆಟ್ರೋಲ್, ಡೀಸೆಲ್ ಜಪ್ತಿ, ಇಬ್ಬರ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ದೇಸೂರ ಗ್ರಾಮದ ಹಾಟ್ಪಾಟ್ ದಾಬಾ ಬಳಿ ಅಕ್ರಮವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲದ ಮೇಲೆ ಸಿಸಿಬಿ (CCB) ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಒಟ್ಟು ₹6,89,000/- ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.
ಸಿಸಿಬಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ಹಾಗೂ ಅವರ ತಂಡ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್ 17, 2026 ರಂದು ಈ ಕಾರ್ಯಚರಣೆ ನಡೆಸಿದೆ.
ಸಂಗ್ರಹಿಸಿದ ಸೊತ್ತುಗಳು ಹಾಗೂ ಬಂಧಿತರು:
ಬಂಧಿತ ಆರೋಪಿಗಳು: ತಮೀಮ್ ಹಸನಸಾಬ ಯರಗಟ್ಟಿ (ಅಮನ್ ನಗರ) ಹಾಗೂ ಸಾಕಿಬ್ ಶಮೀಮ್ ಅನ್ಸಾರಿ (ವೈಭವ್ ನಗರ).
ತಲೆಮರೆಸಿಕೊಂಡಿರುವ ಮಾಲೀಕ: ಇಸ್ರಾರ್ ಮುಲ್ಲಾ (ಟಿ.ವಿ. ಸೆಂಟರ್, ಹನುಮಾನ್ ನಗರ) ನೀಡಿದ ಸೂಚನೆಯಂತೆ ಆರೋಪಿಗಳು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅಕ್ರಮ ಲಾಭಕ್ಕಾಗಿ ಇಂಧನ ಸಂಗ್ರಹಿಸಿದ್ದರು.
ಜಪ್ತಿಯಾದ ಇಂಧನ ಹಾಗೂ ವಾಹನ:
₹99,000/- ಮೌಲ್ಯದ 900 ಲೀಟರ್ ಪೆಟ್ರೋಲ್ (5 ಬ್ಯಾರಲ್)
₹90,000/- ಮೌಲ್ಯದ 900 ಲೀಟರ್ ಡೀಸೆಲ್ (5 ಬ್ಯಾರಲ್)
ಸಾಗಾಟಕ್ಕೆ ಬಳಸಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ (KA-22/AA/7460)
ಆರೋಪಿಗಳು ಇಂಧನವನ್ನು ಬೇರೆಡೆ ಮಾರಾಟ ಮಾಡಲು ಹೊರಟಿದ್ದಾಗ ರಂಗೇಹಾತ್ ಆಗಿ ಸಿಕ್ಕಿಬಿದ್ದಿದ್ದಾರೆ.
ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಪ್ರ.ಸಂ. 215/2026) ದಾಖಲಾಗಿದ್ದು, ಅವಶ್ಯಕ ವಸ್ತುಗಳ ಕಾಯ್ದೆ, ಪೆಟ್ರೋಲಿಯಂ ಕಾಯ್ದೆ ಹಾಗೂ ಬಿಎನ್ಎಸ್ (BNS) ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರಿಸಲಾಗಿದೆ.**************************






