ಪ್ರಕೃತಿ ಬೆಳಗಾವಿ

*ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ*

ಪ್ರಕೃತಿ ಬೆಳಗಾವಿ ಸುದ್ದಿ : ವಿದೇಶ ಪ್ರವಾಸದಲ್ಲಿರುವ ಜನನಾಯಕ ರಮೇಶ್ ಜಾರಕಿಹೊಳಿ ಅವರು ಇಂದು ಲಂಡನ ದೇಶದಲ್ಲಿರುವ ಬರ್ಮಿಂಗ್‌ ಹ್ಯಾಮ್‌ನಲ್ಲಿರುವ ಹಿಂದೂ ಧರ್ಮದ ಪವಿತ್ರ ಗ್ರಂಥ ಶ್ರೀ ರಾಮಾಯಣ ಸೃಷ್ಟಿಕರ್ತ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ ನೀಡಿ ಮಹರ್ಷಿ ಶ್ರೀ ವಾಲ್ಮೀಕಿ ದರ್ಶನ ಪಡೆದರು.

ವಿದೇಶದ ನೆಲದಲ್ಲಿಯೂ ನಮ್ಮ ಸನಾತನ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಭಾರತೀಯ ಮೌಲ್ಯಗಳನ್ನು ಜೀವಂತವಾಗಿರಿಸಿ ಕೊಂಡಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮದ ಸೇವಾ ಕಾರ್ಯಗಳನ್ನು ರಮೇಶ್ ಜಾರಕಿಹೊಳಿ ಮುಕ್ತ ಕಂಠದಿಂದ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಡಾ.ಕಿರಣಕುಮಾರ ಹಿರೇಹಾಳ್, ರಾಜೀವ ಮೆತ್ರಿ, ಕೃಷ್ಣ ಪೂಜಾರ, ವಿಜಯ ಮ್ಯಾಗೇರಿ ಉಪಸ್ಥಿತರಿದ್ದರು.********************************

Leave a Reply

Your email address will not be published. Required fields are marked *

Back to top button