*ಚಿಕ್ಕಬಾಗೇವಾಡಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಶಕ್ತಿ ಸಂಘ’ದ ನೂತನ ಶಾಖೆ ಅದ್ಧೂರಿ ಉದ್ಘಾಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಜೈ ಭೀಮ್ | ಜೈ ಸಂವಿಧಾನ | ಜೈ ಭಾರತ ಎನ್ನುವ ಘೋಷಣೆ ವಾಕ್ಯದೊಂದಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘ (ರಿ)ದ ನೂತನ ಶಾಖೆಯನ್ನು ಅದ್ಧೂರಿಯಾಗಿ ಉದ್ಘಾಟಿಸಲಾಯಿತು ಸಮಾಜದಲ್ಲಿ ಶಿಕ್ಷಣ, ಸಂಘಟನೆ,ಸಮಾನತೆ ಹಾಗೂ ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಂಕಲ್ಪದೊಂದಿಗೆ ಈ ಶಾಖೆ ತನ್ನ ಕಾರ್ಯವನ್ನು ಆರಂಭಿಸಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ ಬಿ ಆರ್ ಅಂಬೇಡ್ಕರ್ ಶಕ್ತಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು ನಮ್ಮ ಜೀವನದಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರದಾರೆಗಳ ಜೊತೆಗೆ ಇನ್ನು ಅನೇಕ ಮಹನೀಯರು ದಲಿತರ ಪರವಾಗಿ ಧ್ವನಿ ಎತ್ತಿದ್ದಾರೆ ಅವರನ್ನು ಕೂಡಾ ನಾವು ಮರೆಯಬಾರದು, ಹಾಗೇಯೆ ನಮ್ಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಏನೆ ಅನ್ಯಾಯ ಆದರೂ ನಮ್ಮ ಸಂಘಟನೆ ನಿರಂತರವಾಗಿ ಹೋರಾಟಕ್ಕೆ ನಿಲ್ಲಬೇಕು ಎಂದರು.
ಬಳಿಕ ವಾಲ್ಮೀಕಿ ಯುವ ಘಟಕದ ಅಧ್ಯಕ್ಷರು ಮಹೇಶ ಶಿಗಿಹಳ್ಳಿ ಮಾತನಾಡಿ ನಮ್ಮ ಸಮಾಜದಲ್ಲಿ ಬೆಳೆಯುವ ಯುವ ಮುಖಂಡರಿಗೆ ಯಾರೆ ಗೊಡ್ಡು ಬೆದರಿಕೆ ಹಾಕಿದರೆ ನಾವು ಸುಮ್ಮನಿರಲ್ಲಾ, ಕಾನೂನಿನ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ ನಮ್ಮ ಸಮಾಜಗಳು ಕೆಳ ಮಟ್ಟದಿಂದ ಬೆಳದು ಬಂದಿವೆ ಇನ್ನ ಮುಂದೆ ಯಾರಾದರೂ ನಮ್ಮ ಸಮಾಜದವರಿಗೆ ದೌರ್ಜನ್ಯ ಮಾಡಲು ಯತ್ನಿಸಿದರೆ ನಾವು ಕಣ್ಣು ಮುಚ್ಚಿ ಕೂರಲ್ಲಾ ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ಯುವ ಮುಖಂಡರು ಹಾಗೂ ವಿದ್ಯಾರ್ಥಿ ಮುಖಂಡರಾದ ಆಕಾಶ ಬೇವಿನಕಟ್ಟಿ ಮಾತನಾಡಿ ನಮ್ಮ ಸಮಾಜದಲ್ಲಿನ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಈಗಿನ ಶಾಲಾ ಮಕ್ಕಳು ಮೊಬೈಲ್ ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಶಿಕ್ಷಣದಿಂದ ವಂಚಿತರಾಗುತ್ತಿರಿ ಹಾಗೇಯೆ ನಮ್ಮ ಸಮಾಜದ ಎಲ್ಲರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಕೆಲಸ ಆಗಬೇಕಿದೆ ಎಂದು ಕಿವಿ ಮಾತು ನೀಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯ, ಜಿಲ್ಲಾ, ತಾಲೂಕು, ಮಹಿಳಾ,ಯುವ ಹಾಗೂ ವಿದ್ಯಾರ್ಥಿ ಘಟಕಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಶಾಖೆಯ ಅಧ್ಯಕ್ಷರಾದ ಗಂಗಪ್ಪ ಕುಂಬಳಿ ಸೇರಿ ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ
ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಲಕ್ಷ್ಮಣ ದಶರಥ ಕೋಲಾಕಾರ, ರಾಜ್ಯ ಉಪಾಧ್ಯಕ್ಷರು ಬಾಬು ಪೂಜಾರಿ, ಸಾಗರ್ ಕೋಲ್ಕಾರ್, ಜಿಲ್ಲಾ ಅಧ್ಯಕ್ಷರು ಬೈರು ಮೇತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಕೋಟಗಾರ್, ಜಿಲ್ಲಾ ಉಪಾಧ್ಯಕ್ಷರು ಮಾರ್ಥಾಂಡ ಕೋಟಗಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಶೋಭಾ ಮತ್ತಿವಾಡೆ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ದೀಪಾ ಕೋಲ್ಕರ್, ಮಹಿಳಾ ಗ್ರಾಮೀಣ ಘಟಕದ ಅಧ್ಯಕ್ಷರು ಪುಷ್ಪ ಕಾಂಬಳೆ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಕೋಲ್ಕಾರ್, ಶಾಖೆ ಅಧ್ಯಕ್ಷರು ಗಂಗಪ್ಪ ಕುಂಬಳಿ, ಚಿಕ್ಕಬಾಗೇವಾಡಿ ಗ್ರಾಮ ಘಟಕದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.********************************






