ಪ್ರಕೃತಿ ಬೆಳಗಾವಿ

*ಸರ್ಕಾರಿ ನೌಕರರ ಸರಿಸಮಾನ ವೇತನ ಸಾರಿಗೆ ನೌಕರರಿಗು ನೀಡಿ. ಸಿಎಂ ಡಿಕೆ ಶಿವಕುಮಾರ್ ರವರಿಗೆ ಮನವಿ* ಯುವ ನಾಯಕ ಮಹೇಶ್ ಎಸ್ ಶಿಗೀಹಳ್ಳಿ*

ಪ್ರಕೃತಿ ಬೆಳಗಾವಿ ಸುದ್ದಿ : ಸಾರಿಗೆ ನೌಕರರು ಹಲವು ವರ್ಷಗಳಿಂದ ಸಾವಿರಾರು ಸಮಸ್ಯೆಗಳನ್ನು ಎದುರಿಸುತಿದ್ದು ನ್ಯಾಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಅನೇಕ ವಿವಿಧ ರೀತಿಯ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ ಆದರೆ ಸಾರಿಗೆ ನೌಕರರಿಗೆ ಇದುವರೆಗು ಶಾಶ್ವತ ಪರಿಹಾರ ಸಿಗದೆ ಮತ್ತಷ್ಟು ಕಿನ್ನತೆಗೆ ಒಳಗಾಗಿದ್ದಾರೆ ಆಯಾ ಪಕ್ಷದ ಯಾವುದೆ ಸರ್ಕಾರ ಆಡಳಿತದಲ್ಲಿ ಇದ್ದರೂ ಸಹ ಸಾರಿಗೆ ನೌಕರರಿಗೆ ಸುಳ್ಳು ಬರವಸೆಗಳನ್ನು ನೀಡಿ ಚುನಾವಣೆ ಸಮಯದಲ್ಲಿ ಸಾರಿಗೆ ನೌಕರರ ಮತಗಳನ್ನು ಪಡೆದು ಮತ್ತೆ ಸಾರಿಗೆ ನೌಕರರ ನಂಬಿಕೆಗೆ ಬೆಂಕಿಯ ಕೊಳ್ಳಿ ಇಡುವ ಪ್ರಯತ್ನ ನಡೆಯುತ್ತಲೆ ಇದೆ.

ಸಾರಿಗೆ ನೌಕರರು ಹೋರಾಟ ಕೈಗೊಂಡರೆ ಅವರ ಮೇಲೆ ಸುಳ್ಳು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಕುಗ್ಗಿಸಿ ಅವರನ್ನು ಸಂಘಟನೆಯಿಂದ ದೂರ ಸರಿಯುವಂತೆ ಮಾಡುತ್ತಾರೆ ಸಂಘಟನೆಗಳಲ್ಲಿ ಬಿಕ್ಕಟ್ಟು ತರುವ ತಂತ್ರಗಳು ಆಗುತ್ತವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಲ್ಲಿ ನೌಕರರು ಸುಮಾರು 92% ಶೇಖಡಾ ರಷ್ಟು ನೌಕರರು ಇದ್ದು ವಿಬಿನ್ನ ಹೋರಾಟಗಳನ್ನು ರೂಪಿಸಿ ಯಶಸ್ವಿಯಾಗಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಜನ ಹಾಗೂ ರಾಜಕೀಯ ನಾಯಕರು ತಿರುಗಿ ನೋಡುವಂತೆ ಮಾಡಿದ್ದು ಕೂಟ ಈ ಹೋರಾಟಕ್ಕೆ ಮಣಿದು ಸರ್ಕಾರ ಹೋರಾಟವನ್ನು ತಿಳಿಗೊಳಿಸಲು ಸುಳ್ಳು ಬರವಸೆಗಳನ್ನು ನೀಡಿ.

ಮುಖ್ಯ ಬೇಡಿಕೆಯಾದ ಸರಕಾರಿ ನೌಕರರ ವೇತನದಂತೆ ಸಾರಿಗೆ ನೌಕರರಿಗೂ ಸರಿಸಮಾನ ವೇತನ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಖಂಡನೀಯ  ಸಾರಿಗೆ ನೌಕರರು ದಿನನಿತ್ಯ ತಮ್ಮ ಕುಟುಂಬವನ್ನು ಬಿಟ್ಟು ಉತ್ತಮವಾದ ಸೇವೆ ನೀಡಲು ತಮ್ಮ ಜೀವದ ಬಗ್ಗೆ ಲೆಕ್ಕಿಸದೆ ಮತ್ತು ಅಧಿಕಾರಿಗಳ ದೌರ್ಜನ್ಯದ ಮದ್ಯದಲ್ಲೂ ದುಡಿದು ಶ್ರಮಿಸಿ ದಿನನಿತ್ಯ ಸಾರಿಗೆ ಇಲಾಖೆಯಿಂದ ನೂರಾರು ಕೋಟಿರೂಪಾಯಿ ಲಾಭ ಒದಗಿಸುತ್ತಾರೆ.

ಇದರಿಂದ ವಿವಿಧ ಪ್ರಶಸ್ತಿಗಳು ಸಾರಿಗೆ ಇಲಾಖೆಗೆ ಸಿಗುತ್ತದೆ ಇದು ಸಾರಿಗೆ ನೌಕರರ ಬೆವರಿನ ಹನಿಯಿಂದ ಮಾತ್ರ ಸಾದ್ಯ ಆದರೆ ಸಾರಿಗೆ ನೌಕರರ ನೋವುಗಳನ್ನು ಬೇಡಿಕೆಗಳನ್ನು ಆಲಿಸದೆ ಅವರಿಗೆ ಮಲತಾಯಿ ಧೋರಣೆ ಮಾಡುತ್ತಿರುವುದು ಖಂಡನೀಯ ಬಿಜೆಪಿ ಹಾಗೂ ಕಾಂಗ್ರೆಸ್ ಆದಿಕಾರದ ಅವದಿಯಲ್ಲಿ ಇದ್ದ ಸಂಬಂಧ ಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳು ಸಾರಿಗೆ ನೌಕರರಿಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಆದರೆ ಹೊಸ ಬರವಸೆ ಇರುವುದು ನೂತನ ಮುಖ್ಯಮoತ್ರಿಗಳಾಗಿ ಆದಿಕಾರ ವಹಿಸಿದ ಸಿಎಂ ಡಿಕೆ ಶಿವಕುಮಾರ ರವರ ಮೇಲೆ ಬರವಸೆ ಇದ್ದು ಅಪಾರವಾದ ನಿರೀಕ್ಷೆ ನೌಕರರು ಇಟ್ಟಿದ್ದಾರೆ.

ಸಾರಿಗೆ ನೌಕರರಿಗೆ ಶಾಶ್ವತ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕೂಟ ಬೆಳಗಾವಿ ವಿಭಾಗದ ಗೌರವ ಅಧ್ಯಕ್ಷರಾದ ಯುವ ನಾಯಕರಾದ ಮಹೇಶ್ ಎಸ್ ಶಿಗೀಹಳ್ಳಿ ಸಿಎಂ ಡಿಕೆ ಶಿವಕುಮಾರ ರವರಿಗೆ ಮನವಿ ಮಾಡಿದ್ದಾರೆ.**********************************

Leave a Reply

Your email address will not be published. Required fields are marked *

Back to top button