ಪ್ರಕೃತಿ ಬೆಳಗಾವಿ

*ಕ್ರಿಕೆಟ್‌ ತರಬೇತಿ ಶಿಬಿರಕ್ಕೆ ಜಿಪಂ ಸಿಇಒ ರಾಹುಲ್‌ ಶಿಂಧೆ ಭೇಟಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಜಿಲ್ಲಾ ಬಾಲಭವನದ ಒಳಾಂಗಣ ಬಾಕ್ಸ್‌ ಕ್ರಿಕೆಟ್‌ ಮೈದಾನದಲ್ಲಿ ತರಬೇತಿ ನೀಡಲು ಆಯ್ಕೆ ಮಾಡಲಾಗಿರುವ ಮಕ್ಕಳ ಕ್ರಿಕೆಟ್‌ ತರಬೇತಿ ಶಿಬಿರಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಶುಕ್ರವಾರ ಭೇಟಿ ನೀಡಿದರು.

ತರಬೇತಿ ಅಂಗವಾಗಿ ಮಕ್ಕಳು ಭೂತರಾಮನಹಟ್ಟಿಯ ಭಗವಾನ ಮಹಾವೀರ ಮೈದಾನದಲ್ಲಿ ತರಬೇತಿಯಲ್ಲಿ ಭಾಗವಹಿಸಿದ್ದರು. ರಾಹುಲ್‌ ಶಿಂಧೆ ಅವರು ತರಬೇತಿಯನ್ನು ವೀಕ್ಷಿಸಿ, ಮಕ್ಕಳೊಂದಿಗೆ ಚರ್ಚಿಸಿದರು.

“ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕ್ರಿಕೆಟ್‌ ಆಯ್ಕೆ ಪ್ರಕ್ರಿಯೆ ಕೈಗೊಂಡು ನಂತರ ಜಿಲ್ಲಾಮಟ್ಟದಲ್ಲಿಯೂ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸಿ, ಅಂತಿಮವಾಗಿ 25 ಬಾಲಕರು ಹಾಗೂ 10 ಬಾಲಕಿಯರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ, ಶಿಬಿರದಲ್ಲಿ ಅವಕಾಶ ಪಡೆದಿರುವ ಎಲ್ಲ ಮಕ್ಕಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದಲ್ಲಿ ತಾವು ಸಾಧನೆ ಮಾಡುವಂತಾಗಬೇಕು” ಎಂದು ಅವರು ಮಕ್ಕಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಜುನೇದ ಪಟೇಲ್‌, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್‌.ಎಮ್.‌ ಬದ್ರಿ, ದೈಹಿಕ ಶಿಕ್ಷಣ ಶಿಕ್ಷಕ ಎ.ಎಮ್.‌ ಮುಲ್ಲಾ, ಆನಂದ ಅಕ್ಯಾಡೆಮಿ ತರಬೇತಿ ಕೇಂದ್ರದ ತರಬೇತುದಾರ ಆನಂದ ಕರಡಿಕರ ಸೇರಿ ಇನ್ನಿತರರು ಹಾಜರಿದ್ದರು.*********************************

Leave a Reply

Your email address will not be published. Required fields are marked *

Back to top button