ಪ್ರಕೃತಿ ಬೆಳಗಾವಿ

*ವಿವಿಧ ರೈಲ್ವೆ ಬೇಡಿಕೆಗಳಿಗೆ ಒತ್ತಾಯಿಸಿ ಸಚಿವ ವಿ ಸೋಮಣ್ಣ ರಿಗೆ ರೈಲು ಹೋರಾಟ ಸಮಿತಿಯಿಂದ ಮನವಿ*

ಪ್ರಕೃತಿ ಬೆಳಗಾವಿ ಸುದ್ದಿ : ಬಾಗಲಕೋಟೆ : ಲೋಕಾಪೂರದಿಂದ ಧಾರವಾಡ ನೂತನ ರೈಲ್ವೆ ಮಾರ್ಗ ನಿರ್ಮಾಣ, ಕುಡಚಿ – ಬಾಗಲಕೋಟೆ ರೈಲ್ವೆ ಮಾರ್ಗ ಕಾಮಗಾರಿ ಶೀಘ್ರ ಮುಕ್ತಾಯ, ಲೋಕಾಪೂರಕ್ಕೆ ಪ್ಯಾಸೆಂಜರ್ ರೈಲು ಪ್ರಾರಂಭ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ರಾಜ್ಯ ರೈಲು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಹುಬ್ಬಳ್ಳಿ ಜನರಲ್ ಮ್ಯಾನೇಜರ್ (Gm) ಪಿ ಅನಂತ ಅವರಿಗೆ ಭೇಟಿಯಾಗಿ ಸಮಗ್ರವಾಗಿ ಚರ್ಚಿಸಿ ನಂತರ ಜನರಲ್ ಮ್ಯಾನೇಜರ್ ಅವರ ಮೂಲಕ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ರವರಿಗೆ ಮನವಿ ಸಲ್ಲಿಸಿದರು.

ಮುಖ್ಯವಾಗಿ ಲೋಕಾಪೂರದಿಂದ ಧಾರವಾಡಕ್ಕೆ ನೂತನ ರೈಲ್ವೆ ಮಾರ್ಗ ನಿರ್ಮಾಣ, ಬಾಗಲಕೋಟೆ-ಮೈಸೂರು (ಬಸವ ಎಕ್ಸಪ್ರೆಸ್) , ಬೆಂಗಳೂರು-ಹೊಸಪೇಠ (ಪ್ಯಾಸೆಂಜರ್ ರೈಲು) ವಿಜಯಪುರ-ಹೈದರಾಬಾದ (ಎಕ್ಸಪ್ರೆಸ್ ರೈಲು) ನ್ನು ಲೋಕಾಪೂರ ದವರೆಗೆ ವಿಸ್ತರಿಸಬೇಕು. ವಿಜಯಪುರದಿಂದ ತಿರುಪತಿಗೆ ಮತ್ತು ವಿಜಯಪುರದಿಂದ ವಾಸ್ಕೋ ಡಿ ಗಾಮಾಕ್ಕೆ ಹೊಸ ರೈಲು ಪ್ರಾರಂಭಿಸಬೇಕು, ಬೆಂಗಳೂರಿನಿಂದ ಮುಂಬೈ ವಂದೇ ಭಾರತ ರೈಲನ್ನು ವಯಾ ಗದಗ ಬಾಗಲಕೋಟೆ ವಿಜಯಪುರ ಮಾರ್ಗವಾಗಿ ಸಂಚರಿಸುವಂತೆ ಮಾಡಬೇಕು. ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕೆಂದು ರೈಲ್ವೆ ಹೋರಾಟ ಸಮಿತಿಯ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮಾಧ್ಯಮ ದವರೊಂದಿಗೆ ಮಾತನಾಡಿದ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿಯವರು “ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ವರ್ಷಪೂರ್ತಿ ಕೋಟ್ಯಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಬೇರೆ ಬೇರೆ ರಾಜ್ಯಗಳಿಂದ ಬರುವ ಭಕ್ತಾದಿಗಳಿಗೆ, ರೈತರಿಗೆ, ಉದ್ಯಮಿಗಳಿಗೆ, ವಕೀಲರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅತ್ಯವಶ್ಯಕವಾದ ಲೋಕಾಪೂರ-ಧಾರವಾಡ ರೈಲು ಮಾರ್ಗ ನಿರ್ಮಾಣ ಆಗಲೇ ಬೇಕು. ಎಲ್ಲ ಸರ್ವೆಗಳು ಯೋಜನೆ ಪರವಾಗಿಯೇ ಇರುವುದರಿಂದ ಕೂಡಲೇ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಮಾನ್ಯ ಹುಬ್ಬಳ್ಳಿ ರೈಲ್ವೆ ಜನರಲ್ ಮ್ಯಾನೇಜರ್ (Gm) ಪಿ ಅನಂತ ಅವರಿಗೆ ಮನವರಿಕೆ ಮಾಡಿ ಒತ್ತಾಯಿಸಿದ್ದೇವೆ ಎಂದು ಹೇಳಿದರು.

ಅದರ ಜತೆಗೆ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಈ ಮಾರ್ಗಕ್ಕಾಗಿ ಭೂಸ್ವಾಧೀನವಾಗುವ ಜಮೀನಿಗೆ ಹೆಚ್ಚಿನ ಬೆಲೆಯನ್ನು ಕೊಡಬೇಕೆಂದು ರೈತರು ನ್ಯಾಯಲಯದ ಮೊರೆ ಹೊಗಿದ್ದಾರೆ. ಈಗಾಗಲೇ ರೈಲ್ವೆ ಅಧಿಕಾರಿಗಳು ಮತ್ತು ಜಮಖಂಡಿ ಭೂಸ್ವಾಧೀನಾಧಿಕಾರಿಗಳು ರೈತರ ಬೇಡಿಕೆಗೆ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಎಲ್ಲ ರೈತರು ಈ ಯೋಜನೆಗೆ ತಮ್ಮ ಜಮೀನುಗಳನ್ನು ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇನ್ನೂ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯ ಗೊಳಿಸಬೇಕು. ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಸೂಕ್ತ ಶೌಚಾಲಯ, ಹಿರಿಯ ನಾಗರಿಕರಿಗಾಗಿ ಬ್ಯಾಟರಿ ಕಾರು ವ್ಯವಸ್ಥೆ, ನಿರಂತರ ಸ್ವಚ್ಛತೆ ಕಾರ್ಯ ಕೈಗೊಳ್ಳುವಂತೆ ಜನರಲ್ ಮ್ಯಾನೇಜರ್ ಅವರಿಗೆ ಮನವಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಭಾಸ ಶಿರಬೂರು, ಗಣಪಥರಾವ್ ಹಜಾರೆ, DR, ರವಿ ಜಮಖಂಡಿ, ನೀಲಕಂಠ ಎಂ ಕೆ ಯಾದವಾಡ ನಾತ್ತುರ್, ಬಸವರಾಜ್ ತ್ವಗ್ಗಿ, ಮೈನೋದ್ದಿನ ಕಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.********************************

Leave a Reply

Your email address will not be published. Required fields are marked *

Back to top button